ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡು ರಿಲೀಸ್

0
1

ಕಿಚ್ಚ ಸುದೀಪ್–ನಿಶ್ವಿಕಾ ನಾಯ್ಡು ಜೋಡಿಗೆ ಫುಲ್ ಮಾಸ್ ಕಿಕ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮಾರ್ಕ್ ಚಿತ್ರದ ಮೊದಲ ಹಾಡು ‘ಮಸ್ತ್ ಮಲೈಕಾ’ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಜೋಡಿ ಈ ಹಾಡಿನಲ್ಲಿ ಹೊಸ ಶೈಲಿಯ ಡ್ಯಾನ್ಸ್ ಹಾಗೂ ಗ್ಲಾಮರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಈ ಹಾಡಿನಲ್ಲಿ ನಿಶ್ವಿಕಾ ನಾಯ್ಡು ‘ಮಲೈಕಾ’ ಪಾತ್ರದಲ್ಲಿ ಮಸ್ತ್ ಆಗಿ ಕುಣಿದಿದ್ದು, ಗ್ರ್ಯಾಂಡ್ ಹಾಗೂ ಹೆವಿ ಕಾಸ್ಟೂಮ್‌ಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಎಂದಿನಂತೆ ಡ್ಯಾನ್ಸ್‌ಗೆ ಹೆಚ್ಚು ಒತ್ತು ನೀಡದ ನಟರಾದರೂ, ಈ ಹಾಡಿನಲ್ಲಿ ಭುಜ ಕುಣಿಸುವ ಸ್ಟೆಪ್ಸ್ ಮೂಲಕ ಅಭಿಮಾನಿಗಳಿಗೆ ವಿಶೇಷ ಕಿಕ್ ನೀಡಿದ್ದಾರೆ.

ಇದನ್ನೂ ಓದಿ: ಶಿರಡಿ ಸಾಯಿಬಾಬಾ ಸನ್ನಿಧಿಗೆ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ

ಸಂಗೀತ ಹಾಗೂ ತಾಂತ್ರಿಕ ವೈಶಿಷ್ಟ್ಯಗಳು: ‘ಮಸ್ತ್ ಮಲೈಕಾ’ ಹಾಡಿಗೆ ಸಂಗೀತ ಸಂಯೋಜನೆ ನೀಡಿರುವುದು ಅಜನೀಶ್ ಲೋಕನಾಥ್. ಹಾಡನ್ನು ಸುದೀಪ್ ಪುತ್ರಿ ಸಾನ್ವಿ ಸುದೀಪ್ ಹಾಡಿದ್ದು, ನಕಾಶ್ ಅಜೀಜ್ ಕಿಚ್ಚ ಸುದೀಪ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಸಾಹಿತ್ಯವನ್ನು ಅನೂಪ್ ಭಂಡಾರಿ ರಚಿಸಿದ್ದಾರೆ.

ಗ್ರ್ಯಾಂಡ್ ಸೆಟ್ ಮತ್ತು ದೃಶ್ಯ ವೈಭವ: ಈ ಹಾಡನ್ನು ದೊಡ್ಡ ದೋಣಿ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಲೈಟಿಂಗ್ ಮತ್ತು ಕಲರ್‌ಫುಲ್ ಅಲಂಕಾರಗಳು ಹಾಡಿಗೆ ವಿಶೇಷ ಮೆರುಗು ತಂದಿವೆ. ನಾಲ್ಕು ದಿನಗಳಲ್ಲಿ ನಿರ್ಮಿಸಲಾದ ಈ ಸೆಟ್‌ನಲ್ಲಿ ಸಾಕಷ್ಟು ಕಲಾವಿದರು ಭಾಗವಹಿಸಿದ್ದು, ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಸಖತ್ ಎನರ್ಜಿ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ: ʻ45′ ಸಿನಿಮಾ ಟ್ರೇಲರ್ ಬಿಡುಗಡೆಗೆ 7 ಕಡೆ ಸ್ಥಳ ನಿಗದಿ

ಚಿತ್ರ ಬಿಡುಗಡೆ: ಮಾರ್ಕ್ ಸಿನಿಮಾ ಇದೇ ಡಿಸೆಂಬರ್ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರ ಜೋರಾಗಿದ್ದು, ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರೀ-ರಿಲೀಸ್ ಇವೆಂಟ್ ಆಯೋಜಿಸುವ ಯೋಜನೆ ಕೂಡ ಇದೆ. ಈಗಾಗಲೇ ‘ಮಸ್ತ್ ಮಲೈಕಾ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

Previous articleಮಂಗಳೂರು ಆರ್‌ಟಿಒ ಕಚೇರಿಗೆ ಬಾಂಬ್ ಬೆದರಿಕೆ