Home Advertisement
Home ಸಿನಿ ಮಿಲ್ಸ್ ಟಾಕ್ಸಿಕ್ ಮುಂದೂಡಿಕೆ: ಅದೃಷ್ಟ ಖುಲಾಯಿಸಿದ ಲವ್ ಮಾಕ್ಟೇಲ್ 3

ಟಾಕ್ಸಿಕ್ ಮುಂದೂಡಿಕೆ: ಅದೃಷ್ಟ ಖುಲಾಯಿಸಿದ ಲವ್ ಮಾಕ್ಟೇಲ್ 3

0
59

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುತ್ತಿದ್ದಂತೆಯೇ, ಅದೇ ದಿನಾಂಕವನ್ನು ಬಳಸಿಕೊಳ್ಳಲು ‘ಲವ್ ಮಾಕ್ಟೇಲ್ 3’ ತಂಡ ಮುಂದಾಗಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಲವ್ ಮಾಕ್ಟೇಲ್ 3’ ಇದೀಗ ಮಾರ್ಚ್ 19ರಂದು ತೆರೆಕಾಣಲಿದೆ.

ಮೂಲತಃ ಏಪ್ರಿಲ್ 10ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಬದಲಾದ ಪರಿಸ್ಥಿತಿಯಲ್ಲಿ ಯುಗಾದಿ ಹಬ್ಬದ ವಿಶೇಷ ದಿನವೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಯುಗಾದಿ + ವೀಕೆಂಡ್ – ಪರ್ಫೆಕ್ಟ್ ರಿಲೀಸ್ ಮುಹೂರ್ತ: ಮಾರ್ಚ್ 19ರಂದು ಯುಗಾದಿ ಹಬ್ಬದ ರಜೆ, ಅದರ ಬೆನ್ನಲ್ಲಿಯೇ ವೀಕೆಂಡ್ ಆರಂಭವಾಗುತ್ತಿರುವುದರಿಂದ ಬಾಕ್ಸ್ ಆಫೀಸ್ ದೃಷ್ಟಿಯಿಂದ ಇದು ಅತ್ಯುತ್ತಮ ಸಮಯ ಎಂದು ಚಿತ್ರತಂಡ ಲೆಕ್ಕ ಹಾಕಿದೆ. ಇದೇ ದಿನ ಬಿಡುಗಡೆಯಾಗಬೇಕಿದ್ದ ‘ಟಾಕ್ಸಿಕ್’ ಮುಂದೂಡಿಕೆಯಾದ ಹಿನ್ನೆಲೆ, ಸೊಲೋ ರಿಲೀಸ್ ಲಾಭವೂ ‘ಲವ್ ಮಾಕ್ಟೇಲ್ 3’ಗೆ ದೊರೆಯುವ ಸಾಧ್ಯತೆ ಇದೆ.

ಕೆವಿಎನ್ ವಿತರಣಾ ಜವಾಬ್ದಾರಿ : ಈ ಚಿತ್ರವನ್ನು KVN Productions ವಿತರಣೆ ಮಾಡುತ್ತಿದೆ. ಕ್ರಿಸ್‌ಮಿ ಬ್ಯಾನರ್ ಅಡಿಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ ಕುಟುಂಬ ಪ್ರೇಕ್ಷಕರಲ್ಲಿ ಉತ್ತಮ ನಿರೀಕ್ಷೆ ಇದೆ.

ತಾರಾಗಣ ಮತ್ತು ನಿರೀಕ್ಷೆ: ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ಅಭಿನಯಿಸಿದ್ದಾರೆ. ‘ಲವ್ ಮಾಕ್ಟೇಲ್’ ಸರಣಿಯ ಹಿಂದಿನ ಎರಡು ಭಾಗಗಳ ಭಾವನಾತ್ಮಕ ಕಥಾನಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರಿಂದ ಮೂರನೇ ಭಾಗದ ಮೇಲೂ ಸಾಕಷ್ಟು ನಿರೀಕ್ಷೆ ಇದೆ.