ಕೊತ್ತಲವಾಡಿ: ಯಶ್ ತಾಯಿ ನಿರ್ಮಾಣದ ಸಿನಿಮಾ ಒಟಿಟಿಗೆ

0
16

ಕೊತ್ತಲವಾಡಿ ಆಗಸ್ಟ್‌ 1ರಂದು ಬಿಡುಗಡೆಯಾಗಿದ್ದ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಈ ಚಿತ್ರದ ನಿರ್ಮಾಪಕರು ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ.

ನಟ ಯಶ್ ತಾಯಿ ಪುಷ್ಪಾ ನಿರ್ಮಾಣದ ಮೊದಲ ಸಿನಿಮಾ ‘ಕೊತ್ತಲವಾಡಿ’. ಆದರೆ ಚಿತ್ರಕ್ಕೆ ಚಿತ್ರಮಂದಿರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಈಗ ಚಿತ್ರ ಒಟಿಟಿಗೆ ಬರುತ್ತಿದೆ.

ಪಿಎ ಪ್ರೊಡಕ್ಷನ್ ಎಂಬ ಬ್ಯಾನರ್ ಅಡಿ ‘ಕೊತ್ತಲವಾಡಿ’ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಗುರಿಯೊಂದಿಗೆ ಈ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಲಾಗಿದೆ.

ಸೆಪ್ಟೆಂಬರ್ 5ರಂದು ‘ಕೊತ್ತಲವಾಡಿ’ ಚಿತ್ರ ಅಮೇಜಾನ್ ಪ್ರೈಮ್‌ಗೆ ಬರಲಿದೆ. ‘ಕೊತ್ತಲವಾಡಿ’ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ ಒಟಿಟಿಯಲ್ಲಿ ತಮಿಳು, ತೆಲಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ನೋಡಬಹುದು.

ಮೊದಲ ದಿನವಾದ ಸೆಪ್ಟೆಂಬರ್ 5ರಂದು ಕನ್ನಡದಲ್ಲಿ ಮಾತ್ರ ಚಿತ್ರ ಒಟಿಟಿಯಲ್ಲಿ ನೋಡಲು ಲಭ್ಯವಿದೆ. ನಂತರದ ದಿನಗಳಲ್ಲಿ ಬೇರೆ ಬೇರೆ ಭಾಷೆಯಲ್ಲಿ ನೋಡಬಹುದು ಎಂಬ ಮಾಹಿತಿ ಸಿಕ್ಕಿದೆ.

ಚಿತ್ರಮಂದಿರದಲ್ಲಿ ಯಶಸ್ಸು ಕಾರಣ ‘ಕೊತ್ತಲವಾಡಿ’ಯನ್ನು ಒಟಿಟಿ ಪ್ರೇಕ್ಷಕರು ಹೇಗೆ ಸ್ವೀಕಾರ ಮಾಡುತ್ತಾರೆ? ಎಂಬುದು ಕುತೂಹಲವಾಗಿದೆ. ಮೊದಲ ಸಿನಿಮಾ ನಿರೀಕ್ಷಿತ ಯಶಸ್ಸು ಪಡೆಯದಿದ್ದರೂ ಯಶ್ ತಾಯಿ ತಮ್ಮ ಬ್ಯಾನರ್ ಮೂಲಕ ಚಿತ್ರಗಳ ವಿತರಣೆ ಪ್ರಾರಂಭಿಸಿದ್ದಾರೆ.

ಇನ್ನು ‘ಕೊತ್ತಲವಾಡಿ’ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕ. ಕಾವ್ಯ ಶೈವ, ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ, ಮಾನಸಿ ಸುಧೀರ್ ಸೇರಿದಂತೆ ಹಲವಾರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಕೊತ್ತಲವಾಡಿ’ ಸಿನಿಮಾಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ ಚಿತ್ರಕ್ಕಿದೆ.

Previous articleಕೋಲಾರ: ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ ಚಾಲನೆ
Next articleಬಳ್ಳಾರಿ: ಮಾಜಿ ದೇವದಾಸಿಯ ಪುತ್ರಿಗೆ 4 ಚಿನ್ನದ ಪದಕ

LEAVE A REPLY

Please enter your comment!
Please enter your name here