ವಿದೇಶಗಳಲ್ಲಿಯೂ ಗಿಲ್ಲಿಯ ವಿಜಯೋತ್ಸವ ಸಂಭ್ರಮಾಚರಣೆ

0
18

ಅಮೇರಿಕಾ (ನ್ಯೂಯಾರ್ಕ್): ಅಮೇರಿಕಾ ದೇಶದ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಪನಿಯಲ್ಲಿ ನೆಲೆಸಿರುವ ಕನ್ನಡಿಗರು, ಬಿಗ್ ಬಾಸ್ ಸೀಸನ್–12 ಅನ್ನು ದಾಖಲೆ ಮತಗಳಿಂದ ಗೆದ್ದ ಹಳ್ಳಿ ಹುಡುಗ ಗಿಲ್ಲಿಯ ವಿಜಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಗಿಲ್ಲಿಗೆ ಅಪಾರ ಅಭಿಮಾನಿ ಬಳಗವಿದೆ ಎಂಬುದನ್ನು ಈ ಸಂಭ್ರಮಾಚರಣೆ ಮತ್ತೊಮ್ಮೆ ಸಾಬೀತುಪಡಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಿಗರ ಮುಖಂಡ ಬೆಂಕಿ ಬಸಣ್ಣ, “ಸಕಲಕಲಾವಲ್ಲಭ ಹಳ್ಳಿ ಹುಡುಗ ಗಿಲ್ಲಿಗೆ ಭಾರತದಲ್ಲಿ ಮಾತ್ರವಲ್ಲ, ಅಮೇರಿಕಾದಲ್ಲಿಯೂ ಭಾರಿ ಫ್ಯಾನ್ ಬೇಸ್ ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಮೇರಿಕಾದಲ್ಲಿ ಬಿಗ್ ಬಾಸ್ ಸೀಸನ್‌ಗೆ ಅಪಾರ ಕ್ರೇಜು ಕಂಡುಬಂದಿತು. ಇದಕ್ಕೆ ಪ್ರಮುಖ ಕಾರಣ ಗಿಲ್ಲಿಯೇ. ಇಷ್ಟು ವರ್ಷ ಬಿಗ್ ಬಾಸ್ ಮೂಲಕ ಸ್ಪರ್ಧಿಗಳು ಫೇಮಸ್ ಆಗುತ್ತಿದ್ದರು. ಆದರೆ ಈ ಬಾರಿ ಅದು ಉಲ್ಟಾ ಆಗಿದ್ದು, ಗಿಲ್ಲಿಯಿಂದಾಗಿ ಬಿಗ್ ಬಾಸ್ ಅಮೇರಿಕಾದಲ್ಲಿ ಹೆಚ್ಚು ಜನಪ್ರಿಯವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:  Movie Review: ಸಮಾಜಮುಖಿ ಭಾರತಿ: ಶಿಕ್ಷಣ ಕ್ರಾಂತಿಗೆ ಸ್ಫೂರ್ತಿ

ಇದೇ ವೇಳೆ ಮಾತನಾಡಿದ ಮನು, “ನಮ್ಮ ಚಿಕ್ಕ ಮಕ್ಕಳಾದ ದಿಯಾ ಮತ್ತು ವಿಹಾನ್ ಅವರಿಗೆ ಗಿಲ್ಲಿ ಎಂದರೆ ತುಂಬಾ ಇಷ್ಟ. ಅವನ ಡೈಲಾಗ್‌ಗಳನ್ನು ಹೇಳುತ್ತಾರೆ, ಅವನ ಡಾನ್ಸ್ ಸ್ಟೆಪ್ಸ್‌ಗಳನ್ನು ಅನುಕರಿಸುತ್ತಾರೆ. ಗಿಲ್ಲಿ ಮಕ್ಕಳಿಗೂ ಪ್ರೇರಣೆಯಾಗಿದ್ದಾನೆ” ಎಂದು ಸಂತೋಷ ವ್ಯಕ್ತಪಡಿಸಿದರು.

ಅಭಿಷೇಕ್ ಮಾತನಾಡಿ, “ಎರಡನೇ ಸ್ಥಾನವನ್ನು ಮುಗ್ಧ ಮನಸ್ಸಿನ, ಒಳ್ಳೆ ಹೃದಯದ, ಸಾಮಾನ್ಯ ಕುಟುಂಬದ ಹುಡುಗಿ ರಕ್ಷಿತಾ ಗೆದ್ದಿರುವುದು ತುಂಬಾ ಖುಷಿಯ ಸಂಗತಿ. ಗಿಲ್ಲಿ ಮತ್ತು ರಕ್ಷಿತಾ ಇಬ್ಬರೂ ಹಳ್ಳಿ ಹಿನ್ನೆಲೆಯಿಂದ ಬಂದು ತಮ್ಮ ಸ್ವಪ್ರತಿಭೆಯಿಂದ ಇಷ್ಟು ದೊಡ್ಡ ವೇದಿಕೆಯಲ್ಲಿ ಮಿಂಚಿದ್ದಾರೆ. ಇದಕ್ಕೆ ನಮ್ಮ ಕನ್ನಡ ಜನತೆಯ ಅಚಲ ಬೆಂಬಲವೇ ಪ್ರಮುಖ ಕಾರಣ” ಎಂದು ಹೇಳಿದರು.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

ಈ ಸಂಭ್ರಮಾಚರಣೆಯ ಭಾಗವಾಗಿ ಆಲ್ಬನಿ ಕನ್ನಡ ಸಂಘದ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಘದ ಸದಸ್ಯರು ಹಾಡಿ, ಕುಣಿದು, ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಪಾಟ್ ಲಕ್ ಮೃಷ್ಟಾನ್ನ ಭೋಜನವನ್ನು ಆಯೋಜಿಸಿ, ಪರಸ್ಪರ ಆತ್ಮೀಯತೆಯನ್ನು ಹಂಚಿಕೊಂಡರು. ಈ ಕಾರ್ಯಕ್ರಮವು ವಿದೇಶದಲ್ಲಿರುವ ಕನ್ನಡಿಗರ ಸಾಂಸ್ಕೃತಿಕ ಒಗ್ಗಟ್ಟು ಮತ್ತು ಕನ್ನಡತನದ ಹೆಮ್ಮೆಯನ್ನು ಪ್ರತಿಬಿಂಬಿಸಿತು.

Previous articleMovie Review: ಸಮಾಜಮುಖಿ ಭಾರತಿ: ಶಿಕ್ಷಣ ಕ್ರಾಂತಿಗೆ ಸ್ಫೂರ್ತಿ