ಸಾವಿರಾರು ಹಾಡುಗಳನ್ನು ಹಾಡಿರುವ ಲೆಜೆಂಡರಿ ಸಿಂಗರ್ ಆಶಾ ಭೋಸ್ಲೆ ಇದೀಗ ನಮ್ಮನ್ನೆಲ್ಲ ಅಗಲಿದ್ದಾರೆ. ಸಂಗೀತದೊಂದಿಗೆ ಬದುಕಿದ್ದ ಆಶಾ ಅವರದ್ದು, ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ.
ಸಂಗೀತದ ಹಿನ್ನೆಲೆ ಇದ್ದ ಮಂಗೇಶ್ಕರ್ ಕುಟುಂಬದಲ್ಲಿ ಜನಿಸಿದ್ದ ಆಶಾ ಅವರು, ಖ್ಯಾತ ಗಾಯಕರೂ ಆಗಿದ್ದ ತಂದೆ ದೀನನಾಥ್ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಳ್ಳುತ್ತಾರೆ.
ತಂದೆ ನಿಧನದ ಬಳಿಕ ಮನೆಯಲ್ಲಿ ಉಂಟಾದ ಆರ್ಥಿಕ ತೊಂದರೆಯಿಂದಾಗಿ ಸಹೋದರಿ ಲತಾ ಮಂಗೇಶ್ಕರ್ ಮತ್ತು ಆಶಾ ಇಬ್ಬರೂ ಹಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬದುಕಲೆಂದು ಹಾಡಲು ಹೋದವರು ಅದನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡರು.
ಲತಾ ಮತ್ತು ಆಶಾ ಚಿಕ್ಕ ವಯಸ್ಸಿನಲ್ಲೇ ರೆಕಾರ್ಡಿಂಗ್ ಸ್ಟುಡಿಯೋಗಳತ್ತ ಹೆಜ್ಜೆ ಹಾಕಿದರು. ಆಗ ಲತಾ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗಿದ್ದವು. ಆ ಸಂದರ್ಭದಲ್ಲಿ ಲತಾ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಗಣಪತ್‌ರಾವ್ ಭೋಸ್ಲೆ ಕೆಲಸ ಮಾಡುತ್ತಿದ್ದರು. ಅವರೊಂದಿಗೆ ಇದ್ದ ಆಶಾ ಅವರ ಸ್ನೇಹ ಪ್ರೇಮವಾಗಿ ಬದಲಾಯಿತು.
ಆಶಾ ಮತ್ತು ಗಣಪತ್‌ರಾವ್ ಅವರ ಪ್ರೀತಿಗೆ ಮಂಗೇಶ್ಕರ್ ಕುಟುಂಬದಲ್ಲಿ ವಿರೋಧ ವ್ಯಕ್ತವಾಯಿತು. ಆದರೆ, ಆಶಾ ಮನೆಯವನ್ನು ದಿಕ್ಕರಿಸಿ 16ನೇ ವಯಸ್ಸಿನಲ್ಲಿಯೇ ಗಣಪತ್‌ರಾವ್ ಜತೆಗೆ ಮದುವೆಯಾದರು.
ಗಣಪತ್‌ರಾವ್ ಭೋಸ್ಲೆ ಅವರೊಂದಿಗೆ ಮದುವೆಯಾದ ಬಳಿಕ ಆಶಾ ಮಂಗೇಶ್ಕರ್ ತಮ್ಮ ಹೆಸರನ್ನು ಆಶಾ ಭೋಸ್ಲೆ ಎಂದು ಬದಲಾಯಿಸಿಕೊಂಡರು. ಅಂದು ಬದಲಾದ ಹೆಸರು ಮುಂದೆ ದೊಡ್ಡ ಬ್ರ್ಯಾಂಡ್ ಆಗಿ ಬೆಳೆಯಿತು.
ಮದುವೆ ಬಳಿಕ ಆಶಾ ಅವರ ಗಣಪತ್‌ರಾವ್ ಅವರಿಂದ ಸಾಕಷ್ಟು ನೋವು ಅನುಭವಿಸಬೇಕಾಯಿತು. ಬಳಿಕ ತಮ್ಮ ಮೂವರು ಮಕ್ಕಳೊಂದಿಗೆ ಪತಿ ಗಣಪತ್‌ರಾವ್ ಅವರಿಂದ ಆಶಾ ದೂರವಾದರು. ಆದರೆ, ಆಶಾ ಭೋಸ್ಲೆ ಅವರು ʻಭೋಸ್ಲೆʼ ಎನ್ನುವ ಹೆಸರನನು ಕೈಬಿಡದೇ ಅದೇ ಹೆಸರಿನಿಂದಲೇ ಕೊನೆವರೆಗೂ ಹಾಡಿದರು.























