ಗಣೇಶ್ ರಾಣೆಬೆನ್ನೂರು
ರಾಣಾ ಹಾಗೂ ಪ್ರಿಯಾಂಕಾ ಆಚಾರ್ ನಾಯಕ-ನಾಯಕಿಯಾಗಿ ನಟಿಸಿರುವ ಏಳುಮಲೆ ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ಟ್ರೇಲರ್ ಹರಿಬಿಟ್ಟಿದೆ. ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೊಂದಿರುವ `ಏಳುಮಲೆ’, ನೈಜ ಘಟನೆ ಆಧರಿಸಿ ಕಥೆ ಹೆಣೆದಿದ್ದಾರೆ ನಿರ್ದೇಶಕ ಪುನೀತ್ ರಂಗಸ್ವಾಮಿ.
ಏಕ್ ಲವ್ ಯಾ ಚಿತ್ರದ ಬಳಿಕ ಖ್ಯಾತ ನಟಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ನಟಿಸಿರುವ ಎರಡನೇ ಚಿತ್ರವಿದು. ರಾಣಾಗೆ ನಾಯಕಿಯಾಗಿ `ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ಆಚಾರ್ ಇದ್ದಾರೆ. ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಉಳಿದ ತಾರಾಗಣದಲ್ಲಿದ್ದಾರೆ.
ತರುಣ್ ಕಿಶೋರ್ ಸುಧೀರ್ ಹಾಗೂ ಅಟ್ಲಾಂಟ ನಾಗೇಂದ್ರ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅದ್ವೆöÊತ್ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಾಹಿತ್ಯ, ಡಿ.ಇಮ್ಮಾನ್ ಸಂಗೀತ ಸಂಯೋಜನೆ `ಏಳುಮಲೆ’ಗಿದೆ.
ಇನ್ನು ಸಿನಿಮಾ ಕುರಿತಂತೆ ನಟಿ ಪ್ರಿಯಾಂಕಾ ಆಚಾರ್ ಮಾತನಾಡಿ ಮಹಾನಟಿ' ರಿಯಾಲಿಟಿ ಶೋ ಮುಗಿದ ಬಳಿಕ ನಾನು ಕಾಲೇಜಿಗೆ ಹೋಗುತ್ತಿದ್ದೆ. ಡಿ. 15 ರಂದು ತರುಣ್ ಸರ್ ಕಾಲ್ ಮಾಡಿ, ಒಂದು ಸಿನಿಮಾ ಇದೆ ಮಾಡುತ್ತೀರಾ ಎಂದು ಕೇಳಿದರು. ನಾನು ತಕ್ಷಣ ಒಪ್ಪಿಕೊಂಡೆ. ಅವತ್ತು ನನ್ನ ಕನಸು ನನಸಾದ ದಿನ. ಗಟ್ಟಿ ಸ್ಕ್ರಿಪ್ಟಗಾಗಿ ಕಾಯುತ್ತಿದ್ದೆ. ಅದು
ಏಳುಮಲೆ’ ಮೂಲಕ ಈಡೇರಿದೆ ಎಂದರು.