Home Advertisement
Home ಸಿನಿ ಮಿಲ್ಸ್ CCL ಟ್ರೋಫಿ ಫ್ಯಾನ್ಸ್‌ಗೆ ಅರ್ಪಿಸಿದ ಕಿಚ್ಚ: ತಂಡ ಸೇರಲು ಅಭಿಮಾನಿಗಳಿಗೂ ಅವಕಾಶ

CCL ಟ್ರೋಫಿ ಫ್ಯಾನ್ಸ್‌ಗೆ ಅರ್ಪಿಸಿದ ಕಿಚ್ಚ: ತಂಡ ಸೇರಲು ಅಭಿಮಾನಿಗಳಿಗೂ ಅವಕಾಶ

0
74

ಸಿಸಿಎಲ್ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಲ್ಲ : ಅಭಿಮಾನಿಗಳಿಗೆ ತಂಡ ಸೇರುವ ಅವಕಾಶ

ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ರ ಮಹಾ ಸಮರದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು 12 ವರ್ಷಗಳ ಬಳಿಕ ಮೂರನೇ ಬಾರಿ ಚಾಂಪಿಯನ್ ಪಟ್ಟ ಗೆದ್ದು, ಚಾಂಪಿಯನ್ಸ್ ಟ್ರೋಫಿಯನ್ನು ತಾಯ್ನಾಡಿಗೆ ಮರಳಿ ತಂದಿದೆ. ಕೊಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಬುಲ್ಡೋಜರ್ಸ್ ಇತಿಹಾಸ ನಿರ್ಮಿಸಿದೆ.

ಈ ಅದ್ಭುತ ಗೆಲುವಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ಕಿಚ್ಚ ಸುದೀಪ್, ಈ ಜಯ ನಮ್ಮೆಲ್ಲರಿಗೂ ಭಾವನಾತ್ಮಕ ಕ್ಷಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಉತ್ತರಕರ್ನಾಟಕದ ಮೊದಲ WebSeries – OTTಯಲ್ಲಿ ಹೊಸ ಮಿಂಚು

“ಇದು ಕೇವಲ ಟೂರ್ನಮೆಂಟ್ ಅಲ್ಲ, ಭಾವನೆ” – ಸುದೀಪ್: “ನಮಗೆ ಸಿಸಿಎಲ್ ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದೊಂದು ಭಾವನೆ. ಅದ್ಭುತ ಆಟಗಾರರ ತಂಡವನ್ನು ಮುನ್ನಡೆಸಿ, ದಶಕದ ನಂತರ ಕಪ್ ಮನೆಗೆ ತರುತ್ತಿರುವುದು ಪದಗಳಲ್ಲಿ ವಿವರಿಸಲಾಗದ ಅನುಭವ. ಒತ್ತಡದ ನಡುವೆಯೂ ತಂಡ ನಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ. ಈ ಗೆಲುವು ಸದಾ ನಮ್ಮ ಬೆನ್ನಿಗೆ ನಿಂತ ಅಭಿಮಾನಿಗಳಿಗೆ ಅರ್ಪಣೆ. ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆ ಈಗ ವಾಸ್ತವವಾಗಿದೆ,” ಎಂದು ಸುದೀಪ್ ಹೇಳಿದರು.

ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ: ಫೆಬ್ರವರಿ 1ರಂದು ಕೊಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ನೀಡಿದ 130 ರನ್‌ಗಳ ಗುರಿಯನ್ನು ಬುಲ್ಡೋಜರ್ಸ್ ಸುಲಭವಾಗಿ ಬೆನ್ನಟ್ಟಿತು. 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇದನ್ನೂ ಓದಿ: ʼರಕ್ಕಸಪುರದೋಳ್ʼ: ರಕ್ಕಸನ ಜಾಡು ಹಿಡಿದು…

ರಾಜೀವ್ ಹನು ‘ಪಂದ್ಯ ಪುರುಷ’: ಬುಲ್ಡೋಜರ್ಸ್ ಪರ ಸ್ಟಾರ್ ಬ್ಯಾಟ್ಸ್‌ಮನ್ ರಾಜೀವ್ ಹನು ಕೇವಲ 35 ಎಸೆತಗಳಲ್ಲಿ 69 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ‘ಪಂದ್ಯ ಪುರುಷ’ ಪ್ರಶಸ್ತಿ ಲಭಿಸಿತು.
ಇನ್ನು ಬೌಲಿಂಗ್ ವಿಭಾಗದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಿದ ಪ್ರತಾಪ್ ‘ಅತ್ಯುತ್ತಮ ಬೌಲರ್’ ಗೌರವಕ್ಕೆ ಪಾತ್ರರಾದರು.

ತಂಡದ ಸಮೂಹ ಸಾಧನೆ: ಸುದೀಪ್ ನೇತೃತ್ವದ ತಂಡದಲ್ಲಿ ಪ್ರದೀಪ್, ಜೆಕೆ, ಕೃಷ್ಣ, ಚಂದನ್, ರಾಜೀವ್, ನಿರೂಪ್, ಪ್ರತಾಪ್, ಅರ್ಜುನ್, ಸಚಿನ್, ಕರಣ್, ಮಂಜುನಾಥ್ ಮತ್ತು ಬಚ್ಚನ್ ಸೇರಿದಂತೆ ಪ್ರತಿಭಾವಂತ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ತಂಡದ ಸಮನ್ವಯ ಮತ್ತು ಶಿಸ್ತಿನ ಆಟವೇ ಈ ಐತಿಹಾಸಿಕ ಜಯಕ್ಕೆ ಕಾರಣವಾಯಿತು.

ಇದನ್ನೂ ಓದಿ: Metro ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ಬೆಂಗಳೂರಿಗರಿಗೆ ರಿಲೀಫ್‌

ಅಭಿಮಾನಿಗಳಿಗೆ ತಂಡ ಸೇರುವ ಅವಕಾಶ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, “ಸಿಸಿಎಲ್ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಲ್ಲ. ಉತ್ತಮ ಕ್ರಿಕೆಟ್ ಪ್ರತಿಭೆ ಹೊಂದಿರುವ ಅಭಿಮಾನಿಗಳಿಗೂ ನಮ್ಮ ತಂಡದಲ್ಲಿ ಅವಕಾಶವಿದೆ. ಯಾರು ನಿಜವಾದ ಪ್ರತಿಭೆ ಹೊಂದಿದ್ದಾರೋ ಅವರು ಮುಂದೆ ಬಂದು ಅವಕಾಶ ಪಡೆಯಬಹುದು,” ಎಂದು ಹೇಳಿದರು. ಇದರಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿದೆ.

ಅಭಿಮಾನಿಗಳಲ್ಲಿ ಸಂಭ್ರಮ: ಬುಲ್ಡೋಜರ್ಸ್ ತಂಡದ ಈ ಐತಿಹಾಸಿಕ ಗೆಲುವು ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಸಂಭ್ರಮ ತಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 12 ವರ್ಷಗಳ ನಿರೀಕ್ಷೆಯ ಬಳಿಕ ಟ್ರೋಫಿ ವಾಪಸ್ ಬಂದಿರುವುದು ಕನ್ನಡಿಗರ ಹೆಮ್ಮೆಯ ಕ್ಷಣವಾಗಿದೆ.

Previous articleವಿಜಯಪುರ: ಖಾಸಗಿ ಜೆಟ್ ಪತನ – ಪೈಲಟ್ ಸೇರಿ ಇಬ್ಬರಿಗೆ ಗಾಯ
Next articleʼವಲವಾರʼ ಮೆಚ್ಚಿದ ಚಿತ್ರರಂಗ: ಕವಿರಾಜ್ ಬೆಂಬಲ, ಸುತನ್ ಗೌಡ ಸಾಧನೆಗೆ ಪ್ರಶಂಸೆ