Home Advertisement
Home ಸಿನಿ ಮಿಲ್ಸ್ ಬಿಗ್‌ ಬಾಸ್‌ ರಕ್ಷಿತಾ ಕಣ್ಣಿರು: ಸ್ನೇಹಬಂಧ ಮೇರದ ಗಿಲ್ಲಿ, ರಘು

ಬಿಗ್‌ ಬಾಸ್‌ ರಕ್ಷಿತಾ ಕಣ್ಣಿರು: ಸ್ನೇಹಬಂಧ ಮೇರದ ಗಿಲ್ಲಿ, ರಘು

0
18

ಬಿಗ್‌ಬಾಸ್ ಕನ್ನಡ ಸೀಸನ್ 12 ಕೇವಲ ಒಂದು ರಿಯಾಲಿಟಿ ಶೋ ಆಗಿ ಉಳಿಯದೆ, ಸ್ಪರ್ಧಿಗಳ ನಡುವೆ ಅನ್ಯೋನ್ಯ ಬಾಂಧವ್ಯವನ್ನು ಬೆಸೆದ ವೇದಿಕೆಯಾಗಿದೆ ಎಂಬುದಕ್ಕೆ ‘ದೊಡ್ಡಮನೆ ಹಬ್ಬ’ ಕಾರ್ಯಕ್ರಮವೇ ಸಾಕ್ಷಿ. ಕಾರ್ಯಕ್ರಮ ಮುಕ್ತಾಯಗೊಂಡು ಸುಮಾರು 25 ದಿನಗಳ ನಂತರ ಎಲ್ಲಾ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಸೇರಿದಾಗ, ಅಲ್ಲಿ ಹಳೆಯ ನೆನಪುಗಳು ಮರುಕಳಿಸಿ ಭಾವುಕ ಕ್ಷಣಗಳಿಗೆ ನಾಂದಿ ಹಾಡಿತು.

ಹೌದು, ಬಿಗ್‌ಬಾಸ್ ಮನೆಯಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ಪಟಾಕಿ ರಕ್ಷಿತಾ ಶೆಟ್ಟಿ, ವೇದಿಕೆಯ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದು ಎಲ್ಲರ ಗಮನ ಸೆಳೆಯಿತು. “ಮನೆಯಲ್ಲಿದ್ದಾಗ ನಾವೆಲ್ಲರೂ ಸದಾ ಒಟ್ಟಿಗಿರುತ್ತಿದ್ದೆವು, ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಆದ್ರೆ ಈಗ ಎಲ್ಲರೂ ದೂರವಾಗುತ್ತಿದ್ದಾರೆ ಎಂಬ ನೋವು ಕಾಡುತ್ತಿದೆ” ಎಂದು ಕಣ್ಣೀರಿಟ್ಟಳು. ಬಿಗ್‌ಬಾಸ್ ಮನೆಯ ಕ್ಷಣಿಕ ವಾತಾವರಣದ ನಡುವೆಯೂ ಹುಟ್ಟಿಕೊಂಡ ಈ ನೈಜ ಸ್ನೇಹದ ಬೆಸುಗೆಯನ್ನು ಕಳೆದುಕೊಳ್ಳಲು ಇಷ್ಟಪಡುತ್ತಿಲ್ಲ ಎಂಬುದು ರಕ್ಷಿತಾಳ ಮಾತುಗಳಲ್ಲಿ ಸ್ಪಷ್ಟವಾಗಿತ್ತು.

ರಕ್ಷಿತಾ ಭಾವುಕರಾದ ತಕ್ಷಣ, ವೇದಿಕೆಯ ಮೇಲಿದ್ದ ‘ಗಿಲ್ಲಿ’ ನಟ ಮತ್ತು ರಘು ತಡಮಾಡದೆ ಬಳಿ ಓಡಿಬಂದು ಸಮಾಧಾನಪಡಿಸಿದರು. ಮೂವರೂ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದ ರೀತಿ ನೋಡುಗರ ಕಣ್ಣಲ್ಲಿ ಕಂಬನಿ ಮಿಡಯುವಂತೆ ಮಾಡಿತು. ಬಿಗ್‌ಬಾಸ್ ಮನೆಯೊಳಗೆ ‘ಮೂವರು ಗೆಳೆಯರು’ ಎಂದೇ ಗುರುತಿಸಿಕೊಂಡಿದ್ದರು. ಗಿಲ್ಲಿಯ ತಮಾಷೆ, ರಘುನ ತಿಳುವಳಿಕೆ ಮತ್ತು ರಕ್ಷಿತಾಳ ಮುಗ್ಧತೆ ಈ ಮೂವರ ಸ್ನೇಹದ ಶಕ್ತಿಯಾಗಿತ್ತು. ವೇದಿಕೆಯ ಮೇಲೆ ತೋರಿದ ಒಗ್ಗಟ್ಟು, ಆಟ ಮುಗಿದರೂ ಸ್ನೇಹ ಮುಗಿದಿಲ್ಲ ಎಂಬುದನ್ನು ಸಾರಿತು.

ಈ ಪ್ರೋಮೊ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಗಿಲ್ಲಿಯ ತರಲೆ-ತುಂಟಾಟಗಳನ್ನು ಮತ್ತು ರಕ್ಷಿತಾ ಆ ಮುಗ್ಧ ನಗುವನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅಶ್ವಿನಿ ಗೌಡ ಹೇಳಿದಂತೆ, ಬಿಗ್‌ಬಾಸ್ ಮನೆಯು ದೂಡ್ಡವರನ್ನು ಮಕ್ಕಳನ್ನಾಗಿ ಮಾಡುತ್ತದೆ ಎಂಬ ಮಾತು ಅಕ್ಷರಶಃ ನಿಜವೆನಿಸಿದೆ.

ಒಟ್ಟಾರೆಯಾಗಿ ಬಿಗ್‌ಬಾಸ್ ಸೀಸನ್ 12ರ ಈ ಸ್ಪರ್ಧಿಗಳು ಸ್ಪರ್ಧೆಯ ಆಚೆಗೂ ಬೆಳೆಸಿಕೊಂಡಿರುವ ಈ ಮಾನವೀಯ ಸಂಬಂಧಗಳು ಪ್ರೇಕ್ಷಕರಿಗೆ ಹತ್ತಿರವಾಗಿವೆ. ‘ದೊಡ್ಡಮನೆ ಹಬ್ಬ’ ಕೇವಲ ಸಂಭ್ರಮದ ವೇದಿಕೆಯಾಗದೆ, ಸ್ನೇಹದ ಸಂಕೇತವಾಗಿ ಹೊರಹೊಮ್ಮಿದೆ.

Previous articleಸಾಮಾನ್ಯ ಜನ ಸಂತೋಷವಾಗಿರುವುದೇ ನಿಜವಾದ ಅಭಿವೃದ್ಧಿ
Next articleಯತ್ನಾಳಗೆ ಮಂತ್ರಾಲಯ ಪರಿಮಳ ಪ್ರಶಸ್ತಿ