ಅದ್ದೂರಿಯಾಗಿ ಅನಾವರಣಗೊಂಡ ‘45’ ಟ್ರೇಲರ್ ಟ್ರೆಂಡಿಂಗ್‌ನಲ್ಲಿ

0
1

ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಹಾವಳಿ ಬಲು ಜೋರು!

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ‘45’ರ ಟ್ರೇಲರ್ ಅನಾವರಣಗೊಂಡಿದೆ. ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಈ ಚಿತ್ರದ ಟ್ರೇಲರ್‌ನಲ್ಲಿ ಸಾಕಷ್ಟು ಅಂಶಗಳಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ವಿಭಿನ್ನ ಲುಕ್‌ನಲ್ಲಿ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಗಮನ ಸೆಳೆದರೆ, ರಾಜ್ ಬಿ ಶೆಟ್ಟಿ ಮುಗ್ಧವಾಗಿಯೇ ಇಷ್ಟವಾಗುತ್ತಾರೆ. ಅದ್ಧೂರಿಯಾಗಿ ಮೂಡಿಬಂದಿರುವ ಈ ಸಿನಿಮಾವನ್ನು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ.

`45′ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಟ್ರೇಲರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾ ಬಿಡುಗಡೆಯಾದ ಮೇಲೂ ಅದೇ ಬಗೆಯ ಪ್ರತಿಕ್ರಿಯೆ ಸಿಗಲಿದೆ ಎಂಬುದು ಚಿತ್ರತಂಡದ ಮಾತು.

ಇದನ್ನೂ ಓದಿ: ಬಿಡುಗಡೆಯ ಮುನ್ನವೇ ಭರ್ಜರಿ ಬಿಸಿನೆಸ್: Zee ತೆಕ್ಕೆಗೆ ’45’ರ ಹಕ್ಕು

ಶಿವಣ್ಣ ಈ ಚಿತ್ರದಲ್ಲಿ ಎರಡು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ‘ಚೆಲುವೆಯ ನೋಟ ಚೆನ್ನ’ ಎಂದಾಗ ಬರುವ ಗೆಟಪ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಉಪೇಂದ್ರ ಸಹ ವಿಭಿನ್ನ ರೀತಿಯಲ್ಲಿ ಕಾಣಸಿಗುತ್ತಾರೆ.

“45’ ಅನ್ನೋದು ಒಂದು ಹೊಸತನದ ಸಿನಿಮಾ. ಹೀಗಾಗಿ ‘ವೆಲ್‌ಕಮ್ ಟು ದ ವರ್ಲ್ಡ್ ಆಫ್ 45’ ಎಂದು ಟ್ಯಾಗ್‌ಲೈನ್ ಹಾಕಿದ್ದೇವೆ. ೪೫ ಅಂದರೆ ಯೂನಿವರ್ಸ್. ಸಿನಿಮಾ ನೋಡಿದವರಿಗೆಲ್ಲ ಒಂದು ಹೊಸ ವಿಸ್ಮಯ ಜಗತ್ತನ್ನು ನೋಡಿದ ಅನುಭವ ಆಗುವುದು ನಿಶ್ಚಿತ. 45 ಅಂದರೆ ದಿನದ ಲೆಕ್ಕ. ಯಾಕೆ 45 ಎಂಬುದು ಸಿನಿಮಾ ನೋಡಿದ ಬಳಿಕ ತಿಳಿಯುತ್ತದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ. ಹಿಂದಿಯಲ್ಲಿ ಮಾತ್ರ ಒಂದು ವಾರದ ನಂತರ ಬಿಡುಗಡೆ ಆಗುತ್ತದೆ’ ಎಂಬುದು ನಿರ್ದೇಶಕ ಅರ್ಜುನ್ ಜನ್ಯ ಅನಿಸಿಕೆ.

ಇದನ್ನೂ ಓದಿ: ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡು ರಿಲೀಸ್

‘ಇದೊಂದು ಫ್ಯಾಂಟಸಿ ಸಿನಿಮಾ ಅನ್ನಬಹುದು. ಆದರೆ ಸಂಪೂರ್ಣವಾಗಿ ಫ್ಯಾಂಟಸಿ ವಿಭಾಗಕ್ಕೆ ಸೇರಿಕೊಳ್ಳುವುದಿಲ್ಲ. ಫ್ಯಾಂಟಸಿ ಜೊತೆಗೆ ಲಾಜಿಕ್ ಕೂಡ ಇದೆ. ಮೂರೂ ನಾಯಕರ ಅಭಿಮಾನಿಗಳಿಗೆ ಎಲ್ಲೂ ಬೇಜಾರಾಗುವುದಿಲ್ಲ. ಸಾಕಷ್ಟು ಖರ್ಚು ಮಾಡಿ ‘45’ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.

Previous articleಬಡ ಮಕ್ಕಳ ಶಿಕ್ಷಣಕ್ಕೆ ಕತ್ತರಿ: ಸರಕಾರ ನೀತಿ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ