ಬೆಂಗಳೂರು: ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಅಪರೂಪದ ಹಾಗೂ ವಿಶೇಷ ಅವಕಾಶವೊಂದು ಲಭಿಸಿದೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬಹುಮುಖ ಪ್ರತಿಭೆ ರಾಜ್ ಬಿ ಶೆಟ್ಟಿ ಒಂದೇ ವೇದಿಕೆಯಲ್ಲಿ ಭಾಗವಹಿಸುವ ಸಂಜೆಯ ಸಂವಾದ ಕಾರ್ಯಕ್ರಮವನ್ನು 45 ಚಿತ್ರದ ತಂಡ ಆಯೋಜಿಸಿದೆ.
ಈ ಕಾರ್ಯಕ್ರಮದ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೇರವಾಗಿ ಭೇಟಿಯಾಗಿ, ಅವರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯಲಿದ್ದಾರೆ. 45 ಸಿನಿಮಾದ ಮೂಲಕ ಇದೇ ಮೊದಲ ಬಾರಿ ಈ ಮೂವರು ಪ್ರಮುಖ ಕಲಾವಿದರು ಒಟ್ಟಾಗಿ ಕಾಣಿಸಿಕೊಂಡಿರುವುದು ಈಗಾಗಲೇ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಅದ್ದೂರಿಯಾಗಿ ಅನಾವರಣಗೊಂಡ ‘45’ ಟ್ರೇಲರ್ ಟ್ರೆಂಡಿಂಗ್‌ನಲ್ಲಿ
ಅಭಿಮಾನಿಗಳ ಪ್ರಶ್ನೆಗಳಿಗೆ ವೇದಿಕೆ: ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು, ತಮಗೆ ಈ ಮೂವರು ನಟರಲ್ಲಿ ಕೇಳಬೇಕಿರುವ ಪ್ರಶ್ನೆಯನ್ನು questionswithteam45@gmail.com ಗೆ ಕಳುಹಿಸಬೇಕಾಗಿದೆ.
ಪ್ರಶ್ನೆ ಕಳುಹಿಸುವಾಗ ಗಮನವರಿಲಿ: ತಮ್ಮ ಹೆಸಎಇನೊಂದಿಗೆ ದೂರವಾಣಿ ಸಂಖ್ಯೆ ಲಗತ್ತಿಸುವುದು ಕಡ್ಡಾಯವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಅಭಿಮಾನಿಗಳಿಂದ ಬಂದ ಪ್ರಶ್ನೆಗಳ ಪೈಕಿ ಅತ್ಯುತ್ತಮ 45 ಪ್ರಶ್ನೆಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭಿಮಾನಿಗಳಿಗೆ 45 ಚಿತ್ರತಂಡದಿಂದ 45 ಆಸನಗಳನ್ನು ಮಿಸಲು ಇರಿಸಿದ್ದು 45 ಚಿತ್ರತಂಡದ ಜೊತೆ ನೇರ ಸಂವಾದ ನಡೆಸುವ ಅವಕಾಶ ಲಭಿಸಲಿದೆ.
45 ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಳ: ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದೇ 45 ಚಿತ್ರದ ಮೇಲೆ ನಿರೀಕ್ಷೆಯನ್ನು ಹಲವು ಪಟ್ಟು ಹೆಚ್ಚಿಸಿದೆ. ಈಗ ಸಂವಾದ ಕಾರ್ಯಕ್ರಮದ ಘೋಷಣೆಯೊಂದಿಗೆ ಚಿತ್ರಕ್ಕೆ ಸಂಬಂಧಿಸಿದ ಹೈಪ್ ಇನ್ನಷ್ಟು ಜೋರಾಗಿದೆ.
ಇದನ್ನೂ ಓದಿ: ಬಿಡುಗಡೆಯ ಮುನ್ನವೇ ಭರ್ಜರಿ ಬಿಸಿನೆಸ್: Zee ತೆಕ್ಕೆಗೆ ’45’ರ ಹಕ್ಕು
ಚಿತ್ರತಂಡದ ಈ ಹೆಜ್ಜೆಯನ್ನು ಅಭಿಮಾನಿಗಳು ಹರ್ಷದಿಂದ ಸ್ವಾಗತಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದು ಕೇವಲ ಒಂದು ಸಿನಿಮಾ ಪ್ರಚಾರ ಕಾರ್ಯಕ್ರಮವಲ್ಲ, ಬದಲಾಗಿ ಅಭಿಮಾನಿಗಳು ತಮ್ಮ ಆರಾಧ್ಯ ಕಲಾವಿದರೊಂದಿಗೆ ನೇರ ಸಂಪರ್ಕ ಸಾಧಿಸುವ ಅಪರೂಪದ ಕ್ಷಣವಾಗಲಿದೆ.























