Home ಸಿನಿ ಮಿಲ್ಸ್ ಬಿಡುಗಡೆಯ ಮುನ್ನವೇ ಭರ್ಜರಿ ಬಿಸಿನೆಸ್: Zee ತೆಕ್ಕೆಗೆ ’45’ರ ಹಕ್ಕು

ಬಿಡುಗಡೆಯ ಮುನ್ನವೇ ಭರ್ಜರಿ ಬಿಸಿನೆಸ್: Zee ತೆಕ್ಕೆಗೆ ’45’ರ ಹಕ್ಕು

0
37

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘45’ ಬಿಡುಗಡೆಗೆ ಇನ್ನೇನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಈ ನಡುವೆ ಚಿತ್ರವು ಮಾರುಕಟ್ಟೆಯಲ್ಲಿ ಅಬ್ಬರದ ವ್ಯವಹಾರ ಮಾಡುತ್ತಿದ್ದು, ಬಿಡುಗಡೆಯ ಮುನ್ನವೇ ಭರ್ಜರಿ ಬಿಸಿನೆಸ್ ದಾಖಲೆ ಬರೆಯುತ್ತಿದೆ.

ಸಿನಿಮಾದ ಟ್ರೇಲರ್ ಅನ್ನು ಡಿಸೆಂಬರ್ 15ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಚಿತ್ರಕ್ಕೆ ದೊರೆತಿರುವ ಕುತೂಹಲ ಮತ್ತು ಸ್ಟಾರ್ ಪವರ್‌ ಕಾರಣ ಟ್ರೇಲರ್ ಮೇಲೂ ಭಾರೀ ನಿರೀಕ್ಷೆ ಮೂಡಿದೆ. ಡಿಸೆಂಬರ್ 25ರಂದು ‘45’ ಸಿನಿಮಾ ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹಿಂದಿ ಭಾಷೆಯ ಆವೃತ್ತಿ ಮಾತ್ರ ಒಂದು ವಾರದ ನಂತರ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇದನ್ನೂ ಓದಿ: ʻ45′ ಸಿನಿಮಾ ಟ್ರೇಲರ್ ಬಿಡುಗಡೆಗೆ 7 ಕಡೆ ಸ್ಥಳ ನಿಗದಿ

ಇತ್ತ, ಚಿತ್ರ ಬಿಡುಗಡೆಯಿಗೂ ಮುನ್ನವೇ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಚಿತ್ರತಂಡಕ್ಕೆ ಮತ್ತಷ್ಟು ಬಲ ನೀಡಿದೆ. ‘45’ ಸಿನಿಮಾದ ಓಟಿಟಿ ಪ್ರಸಾರ ಹಕ್ಕುಗಳನ್ನು ಜನಪ್ರಿಯ ಡಿಜಿಟಲ್ ವೇದಿಕೆ ಝಿ5 (ZEE5) ಪಡೆದುಕೊಂಡಿದ್ದು, ಟಿವಿ ಪ್ರಸಾರ ಹಕ್ಕುಗಳನ್ನು ಝಿ ಕನ್ನಡ ಖರೀದಿಸಿದೆ. ಇದರಿಂದ ಸಿನಿಮಾ ಥಿಯೇಟರ್ ಬಿಡುಗಡೆಯ ಬಳಿಕವೂ ಭಾರೀ ವೀಕ್ಷಕ ವರ್ಗವನ್ನು ತಲುಪಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಶಿವರಾಜ್‌ಕುಮಾರ್‌, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಮೊದಲ ಬಾರಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ವಿಭಿನ್ನ ಶೈಲಿಯ ಕಥಾಹಂದರ ಮತ್ತು ಪ್ಯಾನ್ ಇಂಡಿಯಾ ಮಟ್ಟದ ಮೇಕಿಂಗ್ ಚಿತ್ರಕ್ಕೆ ವಿಶೇಷತೆ ನೀಡಿದೆ. ಬಹುಭಾಷಾ ಬಿಡುಗಡೆಯ ಮೂಲಕ ದಕ್ಷಿಣ ಭಾರತದ ಜೊತೆಗೆ ಉತ್ತರ ಭಾರತದ ಪ್ರೇಕ್ಷಕರನ್ನೂ ಸೆಳೆಯಲು ‘45’ ಸಿನಿಮಾ ಸಜ್ಜಾಗಿದೆ.

ಇದನ್ನೂ ಓದಿ: ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡು ರಿಲೀಸ್

ಒಟ್ಟಿನಲ್ಲಿ, ಟ್ರೇಲರ್ ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಭರ್ಜರಿ ಓಟ ಆರಂಭಿಸಿರುವ ‘45’ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಕೂಡ ದೊಡ್ಡ ಮಟ್ಟದ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆ ಸಿನಿಪ್ರೇಕ್ಷಕರಲ್ಲಿದೆ.