ಕೊನೆಯ ವ್ಯಕ್ತಿ ಉದಯದ ಆಶಯ ಬಿಜೆಪಿ ಸಿದ್ಧಾಂತ

0
140
bommai

ಹೊಸಪೇಟೆ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಮೂಲ ಸಿದ್ಧಾಂತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜನಸಂಕಲ್ಪಯಾತ್ರೆ ಕಾರ್ಯಕ್ರಮಕ್ಕೆ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಸ್‌ಸಿ, ಎಸ್‌ಟಿ ಮೀಸಲಾತಿ ಅವಧಿಯನ್ನು ವಿಸ್ತರಣೆ ಮಾಡುವ ದಿಟ್ಟ ನಿಲುವನ್ನು ತೆಗೆದುಕೊಂಡರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದಯದ ಆಶಯದಂತೆ ದೀನದಯಾಳ್ ಉಪಾಧ್ಯಾಯ ಅವರು ಅಂತ್ಯೋದಯ ಕಾರ್ಯಕ್ರಮ ಕೈಗೊಂಡರು. ಅಂತ್ಯೋದಯ ಮೂಲ ಸಿದ್ಧಾಂತವೇ ಬಿಜೆಪಿಯದ್ದು. ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿಲ್ಲ ಎಂದರು.

Previous articleಭಾರಿ ಮಳೆ: ಬಾದಾಮಿ ಪಟ್ಟಣದಲ್ಲೆಲ್ಲ ನೀರೋ.. ನೀರು..!
Next articleದಲಿತರ ಮನೆಯಲ್ಲಿ ಸಿಎಂಗೆ ಆತಿಥ್ಯ