Home ನಮ್ಮ ಜಿಲ್ಲೆ ವಿಜಯನಗರ ಕೊಡಲಿಯಿಂದ ಪತ್ನಿಯ ಕೊಲೆಗೈದ ಪತಿ

ಕೊಡಲಿಯಿಂದ ಪತ್ನಿಯ ಕೊಲೆಗೈದ ಪತಿ

0
9

ಹೊಸಪೇಟೆ: ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹೊಸಪೇಟೆ ತಾಲೂಕಿನ ವೆಂಕಟಾಪುರ ಕ್ಯಾಂಪ್‌ನಲ್ಲಿ ಬುಧವಾರ ನಡೆದಿದೆ.

ಟಿ.ಬಿ. ಡ್ಯಾಂ ನಿವಾಸಿ ಝಾನ್ಸಿ (34) ಮೃತ ದುರ್ದೈವಿ. ಆಕೆಯ ಪತಿ ಸೆಲ್ವಕುಮಾರ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಹೊಸಪೇಟೆ ಸಮೀಪದ ಟಿ.ಬಿ. ಡ್ಯಾಂ ನಿವಾಸಿ ಸೆಲ್ವಕುಮಾರ್ ಎಂಬಾತನೊಂದಿಗೆ 13 ವರ್ಷಗಳ ಹಿಂದೆ ಝಾನ್ಸಿ ಮದುವೆಯಾಗಿತ್ತು. ಆದರೆ, ಅವರಿಗೆ ಮಕ್ಕಳಾಗಿರಲಿಲ್ಲ. ಇದು ದಂಪತಿ ಮಧ್ಯೆ ಕಲಹ ಸೃಷ್ಟಿಸಿತ್ತು. ಈ ನಡುವೆ ಪತ್ನಿ ಶೀಲದ ಬಗ್ಗೆ ಅನುಮಾನಗೊಂಡಿದ್ದ ಸೆಲ್ವಕುಮಾರ್ ಆಗಾಗ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಝಾನ್ಸಿ 15 ದಿನಗಳ ಹಿಂದೆ ವೆಂಕಟಾಪುರ ಕ್ಯಾಂಪ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆ ಸೇರಿದ್ದಳು.

ಇದನ್ನೂ ಓದಿ: ಹೊಸ ವರ್ಷದ ಶುಭಾಶಯ ಬಂದಿದ್ರೆ ಹುಷಾರ್‌! ಕ್ಲಿಕ್‌ ಮಾಡಬೇಡಿ!!

ಮಂಗಳವಾರ ರಾತ್ರಿ ವೆಂಕಟಾಪುರ ಕ್ಯಾಂಪ್‌ಗೆ ಆಗಮಿಸಿದ್ದ ಆರೋಪಿ, ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ನೋಡ ನೋಡುತ್ತಿದ್ದಂತೆ ಮಚ್ಚಿನಿಂದ ಪತ್ನಿಯ ಕತ್ತಿನ ಭಾಗಕ್ಕೆ ಹೊಡೆದು, ಕೊಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡಿದ ಝಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಎಸ್ಪಿ ಎಸ್.ಜಾಹ್ನವಿ, ಡಿಎಸ್ಪಿ ಮಂಜುನಾಥ ತಳವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.