Home Advertisement
Home ನಮ್ಮ ಜಿಲ್ಲೆ ವಿಜಯನಗರ ಹಂಪಿ ಉತ್ಸವದಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ

ಹಂಪಿ ಉತ್ಸವದಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ

0
30

ಹಂಪಿ(ಹೊಸಪೇಟೆ): ಬಿಗ್‌ಬಾಸ್‌ ಮೂಲಕ ಮನೆ ಮಾತಾಗಿರುವ ಗಿಲ್ಲಿ – ಕಾವ್ಯ ಜೋಡಿ ಹಂಪಿ ಉತ್ಸವದಲ್ಲಿ ನೆರೆದ ಲಕ್ಷಾಂತರ ಪ್ರೇಕ್ಷಕರನ್ನು ಮೋಡಿ ಮಾಡಿತು.

ಗಿಲ್ಲಿ-ಕಾವ್ಯ ನೋಡಲೆಂದೆ ಸಾವಿರಾರು ಸಂಖ್ಯೆಯಲ್ಲಿ ಜನ ಕಾಯುತ್ತ ಕುಳಿತಿದ್ದರು. ಆದರೆ ರಾತ್ರಿ 10 ಗಂಟೆಗೆ ಗಿಲ್ಲಿ-ಕಾವ್ಯ ವೇದಿಕೆಯಲ್ಲಿ ಕಾಣಿಸಿಕೊಂಡರು. ಇವರ ಜತಗೆ ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಕಾಣಿಸಿಕೊಂಡು ಉತ್ಸವಕ್ಕೆ ತಾರಾ ಮೆರಗು ನೀಡಿದರು.

ಆರಂಭದಲ್ಲಿ ಉದಯೋನ್ಮಕ ನಟಿ ನಿಕಿತಾ ಸ್ವಾಮಿ ‘ತರತರ ಹಿಡಿಸಿದೆ ಮನಸಿಗೆ ನೀನು’ ಹಾಗೂ ‘ಬಂಗಾರಿ ಯಾರೇ ನೀನು ಬುಲ್ ಬುಲ್’ ಎನ್ನುವ ಹಾಡಿಗೆ ನೃತ್ಯ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗು ತುಂಬಿದರು. ನಂತರ ಅಭಿಮಾನಿಗಳಿಗೆ ವ್ಯಾಲೆಂಟೈಸ್ ಡೇ ಶುಭಾಶಯ ಕೋರಿ, ಹಂಪಿ ಉತ್ಸವದಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದವನ್ನು ತಿಳಿಸಿದರು.

ಇದನ್ನೂ ಓದಿ: ಶಿವರಾತ್ರಿ ಪೂಜೆಗೆ ನಿರಾಕರಣೆ: ಕಲಬುರಗಿ ಕೋಟೆ ಸುತ್ತ ಉದ್ವಿಗ್ನ ಸ್ಥಿತಿ

ನಂತರ ಕಾಂತಾರ ಬೆಡಗಿ ಸಪ್ತಮಿ ಗೌಡ, ‘ಏನು ಹೇಳಲಿ ನಾನು ಹೊಸತರ’ ಹಾಗೂ ‘ಸಿಂಗಾರ ಸಿರಿಯೇ’ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ನಂತರ ಮಾತನಾಡಿ, ಹೊಸಪೇಟೆ ಆಗಮಿಸಿದಾಗಲೆಲ್ಲಾ ಪ್ರವಾಸಿ ಮಾರ್ಗದರ್ಶಿಗಳನ್ನು ಪಡೆದು ಹಂಪಿ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತೇನೆ ಎಂದರು. ಕೊನೆಯಲ್ಲಿ ವ್ಯಾಲೆಂಟೈಸ್ ಡೇ ಶುಭಾಶಯ ಕೋರಿ ಪಾಪ್ ಕಾರ್ನ್ ಮಂಕಿ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಕಾರ್ಯಕ್ರಮದ ನಂತರ ಮನೆಗಳಿಗೆ ಕ್ಷೇಮವಾಗಿ ತಲುಪುವಂತೆ ಹೇಳಿದರು. ಕನ್ನಡದ ಪ್ರಸಿದ್ಧ ರ‍್ಯಾಪರ್ ಅಲೋಕ್ ಆರ್ ಬಾಬು ತಮ್ಮದೇ ರಚನೆ ಹಾಗೂ ಸ್ವರ ಸಂಯೋಜನೆಯ ಪಾಶ್ಚಿಮಾತ್ಯ ಶೈಲಿಯ ಗೀತೆಗಳನ್ನು ಹಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಗಿಲ್ಲಿ ಹಾಗೂ ಕಾವ್ಯಾ ಜೋಡಿ ಮೋಡಿ: ಪ್ರಸಕ್ತ ಬಿಗ್ ಬಾಸ್ ಸೀಜನ್ ವಿಜೇತ ಹ್ಯಾಸ್ಯ ಕಲಾವಿದ ಗಿಲ್ಲಿ ಹಾಗೂ ಕಿರುತರೆ ನಟಿ ಕಾವ್ಯಾ ಜೋಡಿ ಹಂಪಿ ಉತ್ಸವದಲ್ಲಿ ಮೋಡಿ ಮಾಡಿತು. ನಾಡಿನ ಜನತೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ನನ್ನ ಹಾಗೂ ಕಾವ್ಯಾ ನಡುವಿನ ಸಂಬಂಧ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾವಿಬ್ಬರೂ ಉತ್ತಮ ಸ್ನೇಹಿತರು. ಇದರ ಹೊರತಾಗಿ ಇರುವ ವಿಷಯಗಳ ಊಹೆಗಳು ಅಷ್ಟೇ ಎಂದು ಗಿಲ್ಲಿ ನಟರಾಜ್ ಸ್ಪಷ್ಟ ಪಡಿಸಿದರು. ನಂತರ ಚಲನಚಿತ್ರ ಗೀತೆಗಳ ಗಾಯಕ ನವೀನ್ ಸಜ್ಜು ಕನ್ನಡ ಗೀತೆಗಳನ್ನು ಹಾಡುಗಳನ್ನು ಪ್ರಸ್ತುತಪಡಿಸಿ ಜನರ ಸಿಳ್ಳೇ ಹಾಗೂ ಚಪ್ಪಾಳೆ ಗಿಟ್ಟಿಸಿದರು.

Previous articleತಾಯಿಯ ಬೇಬಿಬಂಪ್‌ ಫೋಟೋಶೂಟ್‌ ವೇಳೆ ಮೊದಲ ಮಗು ಸಾವು
Next articleಶಿವರಾತ್ರಿಯಂದೇ ಶಿವನ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು