Home Advertisement
Home ನಮ್ಮ ಜಿಲ್ಲೆ ವಿಜಯನಗರ ಹಂಪಿ ಉತ್ಸವ ಮುಖ್ಯವೇದಿಕೆಯ ಎದುರು ಅಗ್ನಿ ಅವಘಡ

ಹಂಪಿ ಉತ್ಸವ ಮುಖ್ಯವೇದಿಕೆಯ ಎದುರು ಅಗ್ನಿ ಅವಘಡ

0
58

ಹೊಸಪೇಟೆ: ಹಂಪಿ ಉತ್ಸವ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ವೇದಿಕೆ ಬಳಿ ಬೆಂಕಿ ಅವಘಡ ಸಂಭವಿಸಿದೆ. ಪಟಾಕಿಯ ಕಿಡಿಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಹಂಪಿ ಉತ್ಸವದ ಎಂ.ಪಿ. ಪ್ರಕಾಶ ಮುಖ್ಯವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏರುತ್ತಿದ್ದಂತೆಯೇ ಪಟಾಕಿ ಸಿಡಿಸಿದ್ದಾರೆ. ಈ ವೇಳೆ ವೇದಿಕೆಯ ಎದುರಿಗೆ ಪಟಾಕಿಯ ಕಿಡಿಯೊಂದು ಹೊತ್ತಿಕೊಂಡು ಬೆಂಕಿ ಅವಘಡ ಸಂಭವಿಸಿದೆ. ಸ್ಪಲ್ಪಹೊತ್ತು ಬೆಂಕಿ ಧಗ ಧಗನೇ ಉರಿದಿದ್ದು, ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಬಳಿಕ ಕಾರ್ಯಕ್ರಮ ಯಥಾರೀತಿಯಾಗಿ ನಡೆಯಿತು.

ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!

Previous articleಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!
Next articleಜೀತಕ್ಕಿದ್ದ 24 ಜನ ಕಾರ್ಮಿಕರ ರಕ್ಷಣೆ..!