ಹೊಸಪೇಟೆ: ಆಸ್ತಿಗಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಹಗರಿಶಿರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮರುಳಸಿದ್ದೇಶ್ (26) ಕೊಲೆಯಾದ ದುರ್ದೈವಿ. ಕೊಲೆಯ ಆರೋಪಿ ತಮ್ಮ ಪತ್ರಿಗೌಡ (24) ಹಾಗೂ ಸಂಬಂಧಿ ನಾರಪ್ಪ (29) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ರಿಗೌಡ ಮದ್ಯವ್ಯಸನಿ. ಆಸ್ತಿಯಲ್ಲಿ ಪಾಲು ಬೇಕು ಎಂದು ತಾಯಿ ಜೊತೆ ದಿನಾಲು ಜಗಳ ಮಾಡುತ್ತಿದ್ದನು. ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ತಕರಾರು ಮಾಡಿದ್ದನು. ಬಳಿಕ ಅಣ್ಣನನ್ನೇ ಕೊಲೆ ಮಾಡಿದರೆ ಇಡೀ ಆಸ್ತಿ ನನಗೆ ಸೇರುತ್ತದೆ ಎಂದು ಸಂಬಂಧಿ ಜೊತೆಗೆ ಸಂಚು ಮಾಡಿದ್ದಾನೆ. ಅಣ್ಣನನ್ನು ಟವೆಲ್ನಿಂದ ಉಸಿರುಗಟ್ಟಿಸಿ, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ನಂತರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಹೊರಟಿದ್ದನು.
ಮಗನ ಕೊಲೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತನ ತಾಯಿ ಕೊಲೆ ಕೇಸ್ ದಾಖಲಿಸಿದ್ದಳು. ತನಿಖೆ ಕೈಗೊಂಡು ಘಟನೆ ನಡೆದ 24 ಗಂಟೆಯಲ್ಲೇ ಅರಸೀಕೆರೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.























