ಶಿವಮೊಗ್ಗ–ತಿರುನೆಲ್ವೇಲಿ ನಡುವೆ ವಿಶೇಷ ರೈಲು ಸಂಚಾರ: ಪ್ರಯಾಣಿಕರಿಗೆ ಹಬ್ಬದ ಗಿಫ್ಟ್

0
24

ಶಿವಮೊಗ್ಗ: ಶಿವಮೊಗ್ಗದಿಂದ ತಿರುನೆಲ್ವೇಲಿವರೆಗೆ ನೇರ ರೈಲು ಸಂಚಾರದ ಹಂಬಲ ಕೊನೆಗೂ ಸಾಕಾರಗೊಂಡಿದೆ. ಸಾರ್ವಜನಿಕರ ದೀರ್ಘಕಾಲದ ಒತ್ತಾಯ ಮತ್ತು ಮನವಿಯ ಮೇರೆಗೆ ಕೇಂದ್ರ ರೈಲ್ವೆ ಇಲಾಖೆ ಶಿವಮೊಗ್ಗ–ತಿರುನೆಲ್ವೇಲಿ ನಡುವೆ ವಿಶೇಷ ರೈಲು ಸೇವೆ ನಡೆಸಲು ಅನುಮತಿ ನೀಡಿದ್ದಾರೆ. ಮುಂದೆ ಬರಲಿರುವ ದಸರಾ, ದೀಪಾವಳಿ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ರೈಲು ವಾರಕ್ಕೆ ಒಮ್ಮೆ ಹಾಗೂ ಎಂಟು ವಾರಗಳು (ಅಂದರೆ 07.09.2025 ರಿಂದ 27.10.2025) ರವರೆಗೆ ಪ್ರಾಯೋಗಿಕವಾಗಿ ಸಂಚರಿಸಲಿದೆ.

ಈ ಕುರಿತಂತೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ ಶಿವಮೊಗ್ಗದಿಂದ ತಿರುನೆಲ್ವೇಲಿವರೆಗೆ ನೇರ ರೈಲು ಸಂಚಾರ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರಿಗೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ, ಪ್ರಯೋಗಾತ್ಮಕ ಹಂತದಲ್ಲಿ ಹೊಸ ರೈಲು ಸೇವೆಯನ್ನು ಪರಿಚಯಿಸಲಾಗಿದೆ. ಈ ರೈಲು ಸೇವೆ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತೀರ್ಮಾನಿಸಲಾಗಿದೆ.

ರೈಲು ವೇಳಾಪಟ್ಟಿ:

ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ
ವಿಶೇಷ ರೈಲು ಸಂಖ್ಯೆ 06103: 07.09.2025 ರಂದು ಮಧ್ಯಾಹ್ನ 3.40 ಕ್ಕೆ ತಿರುನೆಲ್ವೇಲಿಯಿಂದ ಹೊರಟು, 08.09.2025 ರಂದು ಮಧ್ಯಾಹ್ನ 1.00 ಕ್ಕೆ ಶಿವಮೊಗ್ಗ ತಲುಪಲಿದೆ.

ಶಿವಮೊಗ್ಗದಿಂದ ತಿರುನೆಲ್ವೇಲಿಗೆ
ವಿಶೇಷ ರೈಲು ಸಂಖ್ಯೆ 06104: 08.09.2025 ರಂದು ಮಧ್ಯಾಹ್ನ 2.20 ಕ್ಕೆ ಶಿವಮೊಗ್ಗದಿಂದ ಹೊರಟು, 09.09.2025 ರಂದು ಬೆಳಿಗ್ಗೆ 9.53 ಕ್ಕೆ ತಿರುನೆಲ್ವೇಲಿಗೆ ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಬೀರೂರು, ತುಮಕೂರು, ಬೆಂಗಳೂರು, ಜೋಲಾರ್‌ಪೆಟ್ಟೆ, ಮಧುರೈ ಮೂಲಕ ಪ್ರಯಾಣಿಸಲಿದೆ.

ಪ್ರಯೋಗಾತ್ಮಕ ಅವಧಿ: ಈ ವಿಶೇಷ ರೈಲು ವಾರಕ್ಕೊಮ್ಮೆ ಸಂಚರಿಸಲಿದ್ದು, ಒಟ್ಟು ಎಂಟು ವಾರಗಳು (07.09.2025 ರಿಂದ 27.10.2025)ವರೆಗೆ ಮಾತ್ರ ಚಾಲನೆ ಮಾಡಲಾಗುತ್ತದೆ.

ಖಾಯಂ ರೈಲು ಸಾಧ್ಯತೆ: ರೈಲು ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡಲ್ಲಿ, ಶಿವಮೊಗ್ಗ–ತಿರುನೆಲ್ವೇಲಿ ನೇರ ರೈಲು ಶಾಶ್ವತಗೊಳಿಸುವ ಬಗ್ಗೆ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಪ್ರಯಾಣಿಕರು ರೈಲು ಸೇವೆಯನ್ನು ಬಳಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

ಈ ನಿರ್ಧಾರದಿಂದ ಶಿವಮೊಗ್ಗ, ತುಮಕೂರು, ಬೆಂಗಳೂರು ಭಾಗದ ಪ್ರಯಾಣಿಕರಿಗೆ ತಿರುನೆಲ್ವೇಲಿ, ಮಧುರೈ ಸೇರಿದಂತೆ ತಮಿಳುನಾಡಿನ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಸಹಾಯಕವಾಗಲಿದೆ.

Previous articleಹುಬ್ಬಳ್ಳಿ: ನೇಹಾ ಹಂತಕ ಫಯಾಜ್ ಜಾಮೀನು ಅರ್ಜಿ ವಜಾ
Next articleಕೊಪ್ಪಳ: ಅಂಜನಾದ್ರಿ ಭಕ್ತರಿಗೆ ಬಂಪರ್ ಕೊಡುಗೆ ಕೊಟ್ಟ ರಾಜ್ಯ ಸರ್ಕಾರ

LEAVE A REPLY

Please enter your comment!
Please enter your name here