ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೆ ಬೆದರಿಕೆ ಕರೆ ಬಂದಿದೆ. ರಾಷ್ಟ್ರಭಕ್ತರ ಬಳಗದ ಜೊತೆ ಎಸ್ಪಿ ಕಚೇರಿಗೆ ತೆರಳಿ ಎಸ್ಪಿ ನಿಖಿಲ್ ಬಿ. ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಶುಕ್ರವಾರ ಮನವಿ ಮಾಡಿದರು.
ಜ. 7ರಂದು ವಿದೇಶಿ ನಂಬರ್‌ನಿಂದ ತಮಗೆ ಬೆದರಿಕೆ ಕರೆ ಬಂದಿದೆ. ನನ್ನ ಮೊಬೈಲ್ ನಂಬರ್‌ಗೆ ವಿದೇಶದಿಂದ +358465445069 ನಂಬರ್‌ನಿಂದ ಕರೆ ಬಂದಿದೆ. ನಾನು ಮತ್ತೆ ಕರೆ ಮಾಡಿದರೆ ಕಟ್ ಮಾಡಿದ್ದಾರೆ. ನನಗೆ ಎಸ್ಕಾರ್ಟ್ ನೀಡಬೇಕು. ಈ ಹಿಂದೆ ನನಗೆ ‘ವೈ’ ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಅದನ್ನು ವಾಪಸ್ ಪಡೆಯಲಾಗಿದೆ. ಇದೀಗ ಬೆದರಿಕೆ ಕರೆ ಬಂದಿರುವುದರಿಂದ ಭದ್ರತೆ ದೃಷ್ಟಿಯಿಂದ ಎಸ್ಕಾರ್ಟ್ ನೀಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈಶ್ವರಪ್ಪ ಮನವಿ ಮಾಡಿದರು.
ಈ ಹಿಂದೆ ಕೂಡ ಎರಡು ಬಾರಿ ಬೆದರಿಕೆ ಕರೆ ಮಾಡಲಾಗಿತ್ತು. ನಾನು ಹಲವಾರು ಹಿಂದೂ ಸಂಘಟನೆಗಳಿಗೆ ಬೆಂಬಲವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕೆಲ ರಾಷ್ಟ್ರ ದ್ರೋಹಿಗಳು ಈ ಕೃತ್ಯ ಎಸಗಿರಬಹುದು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರಾಣ ಬೆದರಿಕೆ ಇರುವುದರಿಂದ ‘ವೈ’ ಶ್ರೇಣಿಯ ಭದ್ರತೆಯನ್ನು ಮತ್ತೆ ಒದಗಿಸಬೇಕು ಎಂದರು.























