ಚುನಾವಣಾ ರಾಜಕೀಯಕ್ಕೆ ಗೀತಾ ಶಿವರಾಜ್‌ಕುಮಾರ್ ನಿವೃತ್ತಿ!

0
61

ಶಿವಮೊಗ್ಗ: ಇನ್ನುಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಟ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗುವ ಭರವಸೆ ನೀಡಿದ್ದಾರೆ.

.ಗೀತಾ ಶಿವರಾಜ್‌ಕುಮಾರ್ ಅವರು ಈ ಹಿಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. “ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಆದರೆ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ನಿಮ್ಮ ಜೊತೆ ಇರುತ್ತೇನೆ. ಯಾವಾಗ ಬೇಕಾದರೂ ಕರೆಯಿರಿ, ನಾನು ಬರುತ್ತೇನೆ” ಎಂದು ಸಮಾರಂಭದಲ್ಲಿ ಹೇಳಿದರು.

ಶ್ವೇತಾ ಬಂಡಿಯವರಿಗೆ ಅಭಿನಂದನೆ: ಈ ವೇಳೆ ನೂತನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಶ್ವೇತಾ ಬಂಡಿಯವರನ್ನು ಗೀತಾ ಶಿವರಾಜ್‌ಕುಮಾರ್ ಅಭಿನಂದಿಸಿದರು. “ಶ್ವೇತಾ ಬಂಡಿಯವರು ನನ್ನ ಚುನಾವಣೆಯ ಪ್ರಚಾರದಲ್ಲಿ ಶ್ರಮಿಸಿದ್ದಾರೆ. ಇಂದಿನ ಸಮಾವೇಶ ನನಗೆ ಖುಷಿ ತಂದಿದೆ. ಮಹಿಳೆಯರು ಅಬಲೆಯರಲ್ಲ, ಅವರಿಗೆ ಶಕ್ತಿ ಇದೆ. ಅವರು ಎಲ್ಲರನ್ನೂ ಜೊತೆಗೂಡಿಸಿಕೊಂಡು ಪಕ್ಷವನ್ನು ಸಂಘಟಿಸಬೇಕು” ಎಂದು ಸಲಹೆ ನೀಡಿದರು.

ಈ ಘೋಷಣೆಯಿಂದಾಗಿ ಶಿವಮೊಗ್ಗ ರಾಜಕೀಯದಲ್ಲಿ ಒಂದು ಹೊಸ ಚರ್ಚೆ ಆರಂಭವಾಗಿದೆ. ಗೀತಾ ಶಿವರಾಜ್‌ಕುಮಾರ್ ಅವರು ನೇರ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ, ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

Previous articleತಾಯಿಯ ವಿರುದ್ಧ ಮಗಳ ಲೈಂಗಿಕ ಕಿರುಕುಳದ ಆರೋಪ: ಅಚ್ಚರಿಯ ತಿರುವು ಪಡೆದ ಪ್ರಕರಣ!
Next articleಯುಪಿಐ: ಭಾರತದ ಡಿಜಿಟಲ್ ರಾಜತಾಂತ್ರಿಕತೆಯ ಪ್ರಬಲ ಅಸ್ತ್ರ

LEAVE A REPLY

Please enter your comment!
Please enter your name here