22 ವರ್ಷದ ಯುವತಿಗೆ ಆನ್‌ಲೈನ್‌ನಲ್ಲಿ 68 ಲಕ್ಷ ರೂ. ವಂಚನೆ

0
57

ಶಿವಮೊಗ್ಗ: ಆನ್‌ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಮಲೆನಾಡಿನಲ್ಲಿ ಹೆಚ್ಚಳವಾಗುತ್ತಿದ್ದು, ಇದೀಗ 22 ವರ್ಷದ ಯುವತಿಗೆ ಬರೋಬ್ಬರಿ 67 ಲಕ್ಷದ 78 ಸಾವಿರ ರೂಪಾಯಿ ವಂಚನೆ ಮಾಡಲಾಗಿದೆ.

ಅಧಿಕ ಲಾಭಾಂಶ ನೀಡುವ ಆಮೀಷವೊಡ್ಡಿ ಆನ್‌ಲೈನ್ ಹೂಡಿಕೆ ಕಂಪನಿ ಹೆಸರಿನಲ್ಲಿ ಈ ಕೃತ್ಯ ಎಸಗಲಾಗಿದೆ. ಎಫ್‌ಯುಎನ್‌ಐಎನ್ ಎಕ್ಸ್‌ಚೇಂಜ್ ಕಂಪನಿ ಹೆಸರಿನಲ್ಲಿ ಬಂದ ಮೆಸೇಜ್‌ನಲ್ಲಿ ಯುವತಿಯ ಹೆಸರಿನಲ್ಲಿ ಐಡಿ ತೆರೆದು ಹೆಚ್ಚು ಲಾಭ ನೀಡುವ ಆಮಿಷವೊಡ್ಡಲಾಗಿತ್ತು.

ಜೂ. 9ರಿಂದ ನ. 26ರವರೆಗೆ 559 ಹಂತಗಳಲ್ಲಿ 67,78,100 ರೂ. ಹಣ ವರ್ಗಾವಣೆಯಾಗಿದೆ. ಬಳಿಕ ಹೂಡಿಕೆ ಮತ್ತು ಹಿಂತೆಗೆದುಕೊಳ್ಳುವುದನ್ನು ಆಪ್‌ನಲ್ಲಿ ಬ್ಲಾಕ್ ಮಾಡಲಾಗಿದೆ.

ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಮೇಲೆ ಶಿವಮೊಗ್ಗದ ಸಿಇಎನ್ ಠಾಣೆಗೆ ಯುವತಿ ದೂರು ನೀಡಿ, ವಂಚಕರನ್ನು ಪತ್ತೆ ಮಾಡಿ, ಹಣ ವಾಪಸ್ ಕೊಡಿಸುವಂತೆ ಕೇಳಿಕೊಂಡಿದ್ದಾರೆ.

Previous articleಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿ ಅನಾರೋಗ್ಯದಿಂದ ಸಾವು
Next articleಅಧಿವೇಶನ ಮುಗಿಯುವುದರೊಳಗೆ ಬೆಳಗಾವಿ ವಿಂಗಡಿಸಿ