ರಾಯಚೂರು(ಮಾನ್ವಿ): ತಾಲೂಕಿನ ಕುರುಡಿ ಗ್ರಾಮದಿಂದ ತಮ್ಮ ಸಂಬಂಧಿಕರ ಮದುವೆಗೆಂದು ತೆರಳಿದವರು ಮರಳಿ ಬಂದಿದ್ದು, ಮಾತ್ರ ಶವವಾಗಿ, ಗ್ರಾಮದಲ್ಲಿ ದುಖಃ ಮಡುಗಟ್ಟಿದ್ದು ಒಂದೇ ಕುಟುಂಬದಲ್ಲಿನ ಸೋದರ ಸಂಬಂಧಿಗಳು ನೀರಿನಲ್ಲಿ ಮುಳುಗಿ ಮೃತಪ್ಪಟ್ಟಿದ್ದು ಸಂಬಂಧಿಕರ ಶೋಕ ಮುಗಿಲು ಮುಟಿತ್ತು.
ತಾಲೂಕಿನ ಗಡಿ ಭಾಗದಲ್ಲಿನ ಆಂಧ್ರಪ್ರದೇಶಕ್ಕೆ ಸೇರಿದ ಕಂದಕೂರು ಗ್ರಾಮದಲ್ಲಿನ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಶುಕ್ರವಾರ ಗ್ರಾಮದ ಹತ್ತಿರ ವಿರುವ ತುಂಗಭದ್ರ ನದಿಗೆ ನಿರ್ಮಿಸಿರುವ ರಾಜಲಬಂಡ ಅಣೆಕಟ್ಟೆ ಪ್ರದೇಶದ ನೀರಿನಲ್ಲಿ ಕುಟುಂಬದ ಸದಸ್ಯರು ಸ್ನಾನಕ್ಕೆಂದು ನದಿಗೆ ಇಳಿದ ಸಮಯದಲ್ಲಿ ಕುರುಡಿ ಗ್ರಾಮದ ಉಮಾವತಿ (35), ಸುಂಕೇಶ್ವರದ ರತ್ನ (28), ಶಿವಾನಂದ (24), ಮಹಾಂತೇಶ್ (24) ಎನ್ನುವವರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸಂಭ್ರಮದಿಂದ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಶೋಕ ಆವರಿಸುವಂತಾಯಿತು. ಈ ಕುರಿತು ಕೊಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























