Home Advertisement
Home ನಮ್ಮ ಜಿಲ್ಲೆ ರಾಯಚೂರು ಕಾಂಗ್ರೆಸ್‌ ದಲಿತ ಸಿಎಂ ಮಾಡೋದು ಅಸಾಧ್ಯ

ಕಾಂಗ್ರೆಸ್‌ ದಲಿತ ಸಿಎಂ ಮಾಡೋದು ಅಸಾಧ್ಯ

0
37

ರಾಯಚೂರು: ಖರ್ಗೆಯವರಿಗೆ ಮೋಸ ಮಾಡಿದ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಸಾಧ್ಯವಿಲ್ಲ. ಕಾಂಗ್ರೆಸ್‌ನದಲ್ಲಿ ಇಬ್ಬರ ಜಗಳ ಮುಗಿಯುವುದಿಲ್ಲ. ಸರ್ಕಾರ ಪತನವಾಗುವ ಲಕ್ಷಣಗಳು ಹೆಚ್ಚಾಗಿದೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಲಿತ ಸಿಎಂ ಮಾಡುವುದಿದ್ದರೆ, ಮಲ್ಲಿಕಾರ್ಜುನ ಖರ್ಗೆಯವರನ್ನು ಮೊದಲೇ ಮಾಡುತ್ತಿದ್ದರು. ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾಗಲೇ ಎಸ್.ಎಂ ಕೃಷ್ಣ ಅವರನ್ನು ಸಿಎಂ ಮಾಡಿದ್ದರು ಎಂದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಡಲ್ಲ. ಡಿ.ಕೆ. ಶಿವಕುಮಾರ್ ಕೇಳಲ್ಲ. ಅವರಿಬ್ಬರು ಜಗಳವಾಡುತ್ತಿದ್ದಾರೆ. ಅವರಿಬ್ಬರ ನ್ಯಾಯ ಮುಗಿಯುತ್ತಿಲ್ಲ. ಮೂರನೇ ನ್ಯಾಯ ಎಲ್ಲಿ ಕೊಡುತ್ತಾರೆ. ದಲಿತ ಸಿಎಂ ಪ್ರಶ್ನೆ ಬರಲ್ಲ ಎಂದರು.

ಇದನ್ನೂ ಓದಿ: ಹುಬ್ಬಳ್ಳಿ: ರಣಜಿ ಫೈನಲ್‌ನಲ್ಲಿ ಗಲಾಟೆ – ಮೈದಾನದಲ್ಲೇ ಕರ್ನಾಟಕದ ಆಟಗಾರನಿಗೆ ಡಿಚ್ಚಿ

ರಾಜ್ಯದಲ್ಲಿ ಭ್ರಷ್ಟಾಚಾರ ಬಿಟ್ಟು ಏನಿದೆ. ನೀವು ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿದಿದ್ದೀರಿ. ಹೆಚ್ಚು ಬಜೆಟ್ ನೀಡಿದ್ದೀರಿ. ಆದರೆ, ಎಲ್ಲಕ್ಕಿಂತ ಹೆಚ್ಚು ಭ್ರಷ್ಟ ಮುಖ್ಯಮಂತ್ರಿಯಾಗಿ ಹೋಗಬೇಡಿ ಎಂದು ವಿಧಾನಸಭೆಯಲ್ಲಿಯೇ ಮುಖ್ಯಮಂತ್ರಿಗಳಿಗೆ ಹೇಳಿದ್ದೀನಿ ಎಂದು ವಿವರಿಸಿದರು.

ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಿಯಂತ್ರಣವಿಲ್ಲ. ಅಭಿವೃದ್ಧಿಗೆ ಹಣವಿಲ್ಲ. ರಾಜ್ಯದ ಕೆಟ್ಟ ಸ್ಥಿತಿಗೆ ಬಂದಿದೆ. ಈ ಪರಿಸ್ಥಿತಿ ಮುಂದುವರೆದರೆ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದಂತ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಬಹುದು ಎಂದು ಹೇಳಿದರು.

Previous articleಶಾಸಕ ಲಮಾಣಿ ಬಂಧನ: ಲಕ್ಷ್ಮೇಶ್ವರದಲ್ಲಿ ಭಾರೀ ಪ್ರತಿಭಟನೆ
Next articleಬಸ್ ತಡೆದು ನಿಲ್ಲಿಸಿದ ಗಜರಾಜ…!