ನಮ್ಮ ಮೆಟ್ರೋ ಮಾರ್ಗದಲ್ಲಿ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ: ಸಿಗಲಿದೆ ನಿರಂತರ ವೈಫೈ

0
64

ಬೆಂಗಳೂರು: ನಗರದ ನಮ್ಮ ಮೆಟ್ರೋ ಎರಡನೇ ಹಂತದ ಮಾರ್ಗಗಳಲ್ಲಿ ನಿರಂತರ ಮತ್ತು ಸುಗಮ ಮೊಬೈಲ್ ಸಂಪರ್ಕವನ್ನು ಒದಗಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, (ಬಿಎಂಆರ್‌ಸಿಎಲ್) ಎಡ್ಯಾನ್ಸ್ ಕಮ್ಯೂನಿಕೇಶನ್ ಅಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್‌ ಕಂಪನಿ (ACES India Pvt. Ltd) ಸಂಸ್ಥೆಯೊಂದಿಗೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ

ಈ ಕುರಿತು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್, ಭಾ.ಆ.ಸೇ, ಅವರು ಮಾತನಾಡಿ, “ನಾವು ಮುಂದಿನ ಪೀಳಿಗೆಯ ಪಯಾಣದ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ. ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ನಮ್ಮ ಸೇವೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಈ 13 ವರ್ಷಗಳ ಪರವಾನಗಿ ಅವಧಿಯ ಒಪ್ಪಂದದ ಭಾಗವಾಗಿ, ಎಸಿಇಎಸ್ ಇಂಡಿಯಾ ಸಂಸ್ಥೆ ಹಂತ-1 ರ ನಾಲ್ಕು ದಿಕ್ಕು ವಿಸ್ತರಣೆಗಳು ಹಾಗೂ ಹಂತ-IIರ ರೀಚ್-5 ಮತ್ತು ರೀಚ್-6 ಮಾರ್ಗಗಳ ಮೆಟ್ರೋ ನಿಲ್ದಾಣಗಳಲ್ಲಿ ಟೆಲಿಕಾಂ ಇನ್ಸಾಸ್ಕೃಕ್ಟರ್‌ (IBS, BTS, ಸೆಲ್ಯುಲಾರ್ ಟವರ್‌ಗಳು ಹಾಗೂ ಪೋಲ್‌ಗಳು) ಅನ್ನು ಸ್ಥಾಪಿಸಿ, ಕಾರ್ಯನಿರ್ವಹಿಸಿ, ನಿರ್ವಹಣೆ ಮಾಡಲಿದೆ” ಎಂದಿದ್ದಾರೆ.

ಇನ್ನು ನಮ್ಮ ಮೆಟ್ರೋ ಮಾರ್ಗಗಳಲ್ಲಿ ಉಂಟಾಗುವ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ “ಈ ಮೂಲಸೌಕರ್ಯವು ಅನೇಕ ಮೊಬೈಲ್ ನೆಟ್ವರ್ಕ್ ಆಪರೇಟರ್‌ಗಳಿಗೆ ಬೆಂಬಲ ನೀಡುತ್ತದೆ, ಜಾಗದ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ, ಪುನರಾವೃತ ವ್ಯಯವನ್ನು ತಪ್ಪಿಸಬಹುದು, ಅನುಸ್ಥಾಪನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಹಾಗೂ 4G/5G ಸೇವೆಗಳ ವೇಗದ ರೋಲ್‌ಔಟ್‌ಗೂ ದಾರಿ ಮಾಡಿಕೊಡುತ್ತದೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಪಯಾಣಿಕರು ನಿರಂತರ ಸಂಪರ್ಕದ ಅನುಭವ ಪಡೆಯಲಿದ್ದಾರೆ.” ಎಂದಿದ್ದಾರೆ.

ಇದು 13 ವರ್ಷಗಳ ಪರವಾನಗಿ ಅವಧಿಯ ಒಪ್ಪಂದವಾಗಿದ್ದು ಈ ಒಪ್ಪಂದದ ವೇಳೆ ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಸಿಸ್ಟಮ್ಸ್) ಎ.ಎಸ್. ಶಂಕರ್ ಎಸಿಇಎಸ್‌ಇ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಎನ್. ಮಝರ್ ಸಹಿಹಾಕಿದರು. ಬಿಎಂಆರ್‌ಸಿಎಲ್ ನಿರ್ದೇಶಕ ಸುಮಿತ್ ಭಟ್ನಾಗರ್ ಹಾಗೂ ಎಸಿಇಎಸ್ ಸಿಇಒ ಡಾ.ಅಕ್ರಮ್ ಅಬುರಾಸ್ ಹಾಗೂ ಅಧಿಕಾರಿಗಳು ಇದ್ದರು.

ನಮ್ಮ ಮೆಟ್ರೋ ಮಾರ್ಗದ ಪ್ರಯಾಣಿಕರಿಗೆ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಸಿಗಲಿದ್ದು, ಭೂಗತ ಮಾರ್ಗವಿರುವ ಡೈರಿ ವೃತ್ತದಿಂದ ನಾಗವಾರದವರೆಗೆ ಸಂಚರಿಸುವ ಪ್ರಯಾಣಿಕರಿಗೆ ತಡೆರಹಿತ ಮೊಬೈಲ್ ಸಂಪರ್ಕ ದೊರೆಯಲಿದೆ. ಅಲ್ಲದೆ ಮೆಟ್ರೋ ನಿಲ್ದಾಣಗಳಲ್ಲಿ ಐಬಿಎಸ್‌, ಬಿಟಿಎಸ್‌ ಸೆಲ್ಯೂಲಾರ್‌ ಟವರ್‌ ಮತ್ತು ಪೋಲ್‌ಗಳನ್ನು ಇಟ್ಟು ವೈಫೈ ಮೂಲಕ ಗ್ರಾಹಕರಿಗೆ 4ಜಿ, 5ಜಿ ಸೇವೆ ಲಭ್ಯವಾಗಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಒಪ್ಪಂದದಿಂದಾಗಿ ಮೆಟ್ರೋ ಎರಡನೇ ಹಂತದ ಮಾರ್ಗಗಳಲ್ಲಿ ಹಾಗೂ ಸುರಂಗ ಮಾರ್ಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ವೈಫೈ ಅಳವಡಿಸಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದ್ದು. ನಿರಾತಂಕ ಮೊಬೈಲ್ ಸಂಪರ್ಕ ದೊರೆಯಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

Previous articleChikkamagaluru Tour: ಚಿಕ್ಕಮಗಳೂರು ಪ್ರವಾಸಿಗರಿಗೆ ಮಹತ್ವದ ಮಾಹಿತಿ
Next articleಸ್ಪಷ್ಟೀಕರಣ ಕೊಡಿ ಇಲ್ಲವೇ ರಾಜೀನಾಮೆ ನೀಡಿ: ಪ್ರಿಯಾಂಕ್‌ ಖರ್ಗೆಗೆ ಒತ್ತಾಯ

LEAVE A REPLY

Please enter your comment!
Please enter your name here