Home ನಮ್ಮ ಜಿಲ್ಲೆ ಗದಗ ಲಕ್ಕುಂಡಿ ಉತ್ಖನನದಲ್ಲಿ ಲೋಹದ ಹಣತೆ, ಎಲುಬು ಪತ್ತೆ

ಲಕ್ಕುಂಡಿ ಉತ್ಖನನದಲ್ಲಿ ಲೋಹದ ಹಣತೆ, ಎಲುಬು ಪತ್ತೆ

0
22

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ 7ನೇ ದಿನದ ಉತ್ಖನನದಲ್ಲಿ ಲೋಹದ ಹಣತೆ ಆಕಾರದಲ್ಲಿರುವ ಲೋಹದ ತುಂಡು, ಎಲುಬುಗಳು ಪತ್ತೆಯಾಗಿದೆ.

ದೇವಾಲಯದಲ್ಲಿ ದೇವರಿಗೆ ಕರ್ಪೂರದಾರತಿ ಬೆಳಗಲು ಬಳಸುತ್ತಿದ್ದ ಆರತಿ ತಟ್ಟೆಯ ಲೋಹದ ತುಂಡಾಗಿರುವಬಹುದೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಪುರಾತತ್ವ ಇಲಾಖೆಯ ಸಿಬ್ಬಂದಿ ಲೋಹದ ತುಂಡು ಸ್ವಚ್ಛಗೊಳಿಸಿ ಸಂಗ್ರಹಿಸಿದ್ದಾರೆ.

ಪರೀಕ್ಷೆಯ ನಂತರ ಯಾವ ಕಾಲದ್ದು, ಏತಕ್ಕಾಗಿ ಬಳಸುತ್ತಿದ್ದರು ಎಂಬ ಬಗ್ಗೆ ಸ್ಪಷ್ಟತೆ ಬರಲಿದೆಯೆಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ, ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ತಿಳಿಸಿದ್ದಾರೆ.

ಯೋಮೆಟ್ರಿಕ್ ಹಾಜರಾತಿ: ಉತ್ಖನನ ಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಯೋಮೆಟ್ರಿಕ್ ಯಂತ್ರ ಕೆಲ ಕಾರ್ಮಿಕರ ಬೆರಳಚ್ಚುಗಳನ್ನು ಗುರುತಿಸುತ್ತಿಲ್ಲ. ಇದರಿಂದ ಕಾರ್ಮಿಕರು ಹರಸಾಹಸಪಡುವಂತಾಗಿದೆ. ಬಯೋಮೆಟ್ರಿಕ್ ಹಾಜರಾತಿಗೆ ಕಾರ್ಮಿಕರು ಹೈರಾಣಾಗಿದ್ದರಿಂದ ಕೊನೆಗೆ ಮುಂಚಿನಂತೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಳ್ಳಲಾಯಿತು.