ಬೀದರ್: ಮತ್ತೆ ಮತ್ತೆ ನಾಯಕತ್ವದ ಬದಲಾವಣೆ ಪ್ರಶ್ನೆ ಕೇಳ್ಬೇಡಿ ಪ್ಲೀಸ್… ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಪತ್ರಕರ್ತರಿಗೆ ಮಾಡಿದ ವಿನಂತಿ ಇದು. ಹೇಳಿಕೆ ನೀಡುವಲ್ಲಿ ನಿಸ್ಸೀಮರೆನಿಸಿದ ಲಾಡ್, ಭಾನುವಾರ ಇಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕೇಳಿದ ನಾಯಕತ್ವ ಬದಲಾವಣೆ ಗೊಂದಲ ಕುರಿತ ಪ್ರಶ್ನೆ ಬಗ್ಗೆ ಏನೇನೂ ಹೇಳಲಿಲ್ಲ.
ಹೈಕಮಾಂಡ್ ನಿರ್ಧಾರವೇ ಫೈನಲ್ ಎಂದು ಸಿಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಅವರೇ ಸ್ಪಷ್ಟ ಮಾಹಿತಿ ನೀಡಿದ್ದರಿಂದ ಈ ಬಗ್ಗೆ ನಾನೇನೂ ಹೇಳಲಾರೆ. ಅದರ ಬಗ್ಗೆ ಪದೆ ಪದೇ ನನಗೆ ಪ್ರಶ್ನೆ ಕೇಳ್ಬೇಡಿ ಎಂದರು.
ಬಿಜೆಪಿಯವರು ಮಹಾ ಲೂಟಿಕೋರರು. ದೇಶದ ಸುಮಾರು 22 ರಾಜ್ಯಗಳಲ್ಲಿ, ಕೇಂದ್ರದಲ್ಲಿ ಬರೀ ಲೂಟಿ ಕೆಲಸದಲ್ಲಿಯೇ ತೊಡಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರ ಲೂಟಿ ದಂಧೆ ಬಂದ್ ಆಗಿದೆ. ಹೇಗಾದರೂ ಮಾಡಿ ನಮ್ಮಲ್ಲಿ ಗೊಂದಲ ಸೃಷ್ಟಿಸಿ ಅಧಿಕಾರಕ್ಕೆ ಬಂದು ಲೂಟಿ ಮಾಡುವ ಕನಸು ಕಾಣುತ್ತಿದ್ದಾರೆ. ಇದು ಅಸಾಧ್ಯ ಮಾತು. ರಾಜ್ಯದಲ್ಲಿ ಬಿಜೆಪಿ ಯುಗ ಖತಮ್ ಆಗಿದೆ. ಇನ್ನೆಂದೂ ಅವರು ಇಲ್ಲಿ ಅಧಿಕಾರಕ್ಕೆ ಬರುವುದಿಲ್ಲ. 2028ರಲ್ಲಿ ಕಾಂಗ್ರೆಸ್ ಸರ್ಕಾರವೇ ಪಕ್ಕಾ ಎಂದು ಪ್ರತಿಪಾದಿಸಿದರು.
























Tried BG88Bet recently. Decent variety of games, especially if you’re into slots. The bonuses are okay, nothing groundbreaking. It’s a reliable choice, though! Go to bg88bet.