ಕ್ರಿಸ್ಮಸ್, ಹೊಸವರ್ಷಕ್ಕೆ ಬೆಂಗಳೂರು ಸಜ್ಜಾಗುತ್ತಿರುವ ಹೊತ್ತಿನಲ್ಲೇ ಕೋಳಿ ಮೊಟ್ಟೆ ದರ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ. ಸಂಡೇ ಇರಲಿ ಅಥವಾ ಮಂಡೇ ಇರಲಿ ನಿತ್ಯ ಕೋಳಿ ಮೊಟ್ಟೆ ಸೇವಿಸಿ ಎನ್ನುತ್ತಿದ್ದರು.
ಇದೀಗ ಮೊಟ್ಟೆ ಖರೀದಿಸಬೇಕಾ ಅಥವಾ ಬೇಡವಾ ಎಂದು ಆಲೋಚಿಸುವಂತಾಗಿದೆ. ಏಕೆಂದರೆ ಇದೀಗ ಒಂದು ಮೊಟ್ಟೆ 7ರಿಂದ 8 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರ ನಡುವೆ ಕ್ರಿಸ್ಮಸ್, ಹೊಸವರ್ಷ ಇರುವುದರಿಂದ ಕೇಕ್ ಉತ್ಪಾದನೆಗಾಗಿ ಮೊಟ್ಟೆ ಬೇಡಿಕೆ ಹೆಚ್ಚಾಗಿದೆ.
ಆದರೆ ಪೂರೈಕೆ ಕಡಿಮೆಯಾಗಿರುವುದರಿಂದ ಮೊಟ್ಟೆಯ ದರವೂ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ನಗರದಲ್ಲಿ 5 ರಿಂದ 6.50 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದ್ದ ಮೊಟ್ಟೆ ಇದೀಗ 7 ರಿಂದ 8 ರೂಪಾಯಿಗೆ ಮಾರಾಟವಾಗುತ್ತಿದೆ. ತಮಿಳುನಾಡಿನ ನಾಮಕಲ್‌ನಿಂದ ಪ್ರತಿನಿತ್ಯ 79 ಲಕ್ಷ ಮೊಟ್ಟೆ ಪೂರೈಕೆಯಾಗುತ್ತಿತ್ತು.
ಸದ್ಯ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಮೊಟ್ಟೆ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲದ ಕಾರಣ ಕೋಳಿ ಮೊಟ್ಟೆ ದರ ಏರಿಕೆಯಾಗಿದೆ. ಇನ್ನು ಕೋಳಿ ಮೊಟ್ಟೆ ಜೊತೆಗೆ ಕೋಳಿ ಬೆಲೆಯೂ ಹೆಚ್ಚಾಗಿದ್ದು ಬಾಟ್ಲರ್ ಕೋಳಿ ಕೆಜಿಗೆ 150 ರೂ. ಹಾಗೂ ಫಾರಂ ಕೋಳಿ ಕೆ.ಜಿಗೆ 170 ರೂ.ಗೆ ಏರಿಕೆಯಾಗಿದೆ.
ಹೀಗಾಗಿ ಕೋಳಿ ಹಾಗೂ ಮೊಟ್ಟೆಯಿಂದ ಮಾಡಿದ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಇನ್ನೂ ಎರಡು-ಮೂರು ತಿಂಗಳು ಕೋಳಿ, ಮೊಟ್ಟೆ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ. ಇತ್ತ ಈ ದರ ಏರಿಕೆಯು ಕ್ರಿಸ್ಮಸ್ ಕೇಕ್ ತಿನ್ನುವ ಹಾಗೂ ಖರೀದಿಸುವವ ಜೇಬಿಗೂ ಕತ್ತರಿ ಬೀಳೋದು ಗ್ಯಾರಂಟಿ.
ಚಳಿಗಾಲದಲ್ಲಿ ಹೆಚ್ಚು ಬಳಕೆ: ಚಿಲ್ಲರೆ ಮಾರಾಟದಲ್ಲಿ 1 ಮೊಟ್ಟೆಗೆ ಈಗ 8 ರೂ.ಆಗಿದೆ. ಸದ್ಯ ಚಳಿಗಾಲ ಇರುವುದರಿಂದ ಉತ್ಪಾದನೆ ಕೂಡ ಕಡಿಮೆಯಾಗಿದೆ.
ಇದರ ನಡುವೆ ವಿದೇಶಗಳಿಗೆ ಮೊಟ್ಟೆ ಹೆಚ್ಚಾಗಿ ರಫ್ತಾಗುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಮೊಟ್ಟೆ ಬಳುತ್ತಿದ್ದಾರೆ. ರಂಗನಾಥ್ ಶೆಟ್ಟಿ, ವ್ಯಾಪಾರಿ
ಕೊರತೆಗೆ ಕಾರಣ ಏನು?: ಕಳೆದ ವರ್ಷ ಹಕ್ಕಿ ಜ್ವರ ಸಾಕಾಣಿಕೆ ಕಡಿಮೆಯಾಗಿತ್ತು. ಇದರಿಂದ ಬೆಂಗಳೂರಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮೊಟ್ಟೆಗಳ ಕೊರತೆ ಉಂಟಾಗಿದೆ. ಪ್ರತಿನಿತ್ಯ ಬೆಂಗಳೂರಲ್ಲಿ 1.10 ಕೋಟಿ ಮೊಟ್ಟೆಗಳಿಗೆ ಬೇಡಿಕೆ ಇದೆ.
ಆದರೆ 30 ರಿಂದ 40 ಲಕ್ಷ ಮೊಟ್ಟೆಗಳ ಕೊರತೆ ಎದುರಾಗಿದೆ. ಖರೀದಿಸಲು ಕಷ್ಟ ಮೊಟ್ಟೆ ದರ ಏರಿಕೆ ಆಗಿರುವುದರಿಂದ ಮಕ್ಕಳಿಗೆ ಸರಿಯಾಗಿ ಮೊಟ್ಟೆ ಕೊಡಲು ಆಗುತ್ತಿಲ್ಲ. ಮಕ್ಕಳ ಪ್ರೋಟಿನ್‌ಗಾಗಿ ನಿತ್ಯ ಮೊಟ್ಟೆ ಕೊಡಿ ಎಂದು ವೈದ್ಯರು ಹೇಳುತ್ತಾರೆ.
ಆದರೆ ಮೊಟ್ಟೆ ದರ ವರ್ಷಕ್ಕೆ ಮೂರು-ನಾಲ್ಕು ಬಾರಿ ಏರಿಕೆಯಾಗುತ್ತಿರುವುದರಿಂದ ಖರೀದಿಸಲು ಹಾಗೂ ಮಕ್ಕಳಿಗೆ ನೀಡಲು ಕಷ್ಟವಾಗುತ್ತಿದೆ. ನಾಗರಾಜ್, ಮಾರಾಟಗಾರ
ಖರೀದಿಸಲು ಕಷ್ಟ: ಮೊಟ್ಟೆ ದರ ಏರಿಕೆ ಆಗಿರುವುದರಿಂದ ಮಕ್ಕಳಿಗೆ ಸರಿಯಾಗಿ ಮೊಟ್ಟೆ ಕೊಡಲು ಆಗುತ್ತಿಲ್ಲ. ಮಕ್ಕಳ ಪ್ರೋಟಿನ್‌ಗಾಗಿ ನಿತ್ಯ ಮೊಟ್ಟೆ ಕೊಡಿ ಎಂದು ವೈದ್ಯರು ಹೇಳುತ್ತಾರೆ. ಆದರೆ ಮೊಟ್ಟೆ ದರ ವರ್ಷಕ್ಕೆ ಮೂರು-ನಾಲ್ಕು ಬಾರಿ ಏರಿಕೆಯಾಗುತ್ತಿರುವುದರಿಂದ ಖರೀದಿಸಲು ಹಾಗೂ ಮಕ್ಕಳಿಗೆ ನೀಡಲು ಕಷ್ಟವಾಗುತ್ತಿದೆ.ನಳಿನಿ, ಗೃಹಿಣಿ
























Yo! Checked out malinacasinosport the other day and it’s got a good vibe. If you love sports betting with a casino twist, you should check that. Here’s the link to it: malinacasinosport