ಬೆಂಗಳೂರು: ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರು, ಭಾರತದ ಸಂವಿಧಾನದ ಸೆಕ್ಷನ್ 176ರ ಅನ್ವಯ ಶಾಸನಸಭೆಯ ಆಯಾ ವರ್ಷದ ಮೊದಲ ಅಧಿವೇಶನ ರಾಜ್ಯಪಾಲರ ಭಾಷಣದಿಂದಲೇ ಆರಂಭವಾಗಬೇಕು. ಅವರು ಬಾರದೇ ಇದ್ದರೆ ಅಧಿವೇಶನ ನಡೆಸಲು ಬರವುದಿಲ್ಲ ಎಂದು ಹೇಳಿದ್ದಾರೆ.
ಹಿಂದೆ 1966ರಲ್ಲಿ ಪಶ್ಚಿಮ ಬಂಗಾಳದಲ್ಲಿ ಇಂತಹುದೇ ಪರಿಸ್ಥಿತಿ ಉದ್ಭವಿಸಿದಾಗ ರಾಜ್ಯಪಾಲರ ಭಾಷಣವನ್ನು ಸ್ಪೀಕರ್ ಮಂಡಿಸಿದ್ದರು. ನಂತರ ಸುಪ್ರಿಂಕೋರ್ಟ್ ಸ್ಪೀಕರ್ ನಿಲುವನ್ನು ಅಮಾನ್ಯ ಮಾಡಿತ್ತು. ಆದರೆ ಭಾಷಣದಲ್ಲಿನ ಎಲ್ಲಾ ಅಂಶಗಳನ್ನು ಓದುವುದು ಅಥವಾ ಭಾಗಶಃ ಓದುವುದು ಅಥವಾ ಭಾಗಶಃ ನಿರಾಕರಿಸುವುದು ರಾಜ್ಯಪಾಲರ ವಿವೇಚನಾಧಿಕಾರಕ್ಕೆ ಬಿಟ್ಟಿದ್ದು ಎಂದು ಅವರು ಹೇಳಿದರು.
ಪರಸ್ಪರ ಸಮಾಲೋಚನೆ ನಡೆಸಿ ರಾಜ್ಯಪಾಲರ ಮನವೊಲಿಸುವ ಪ್ರಯತ್ನ ರಾಜ್ಯ ಸರಕಾರ ಮಾಡಬೇಕು. ಈ ವಿಷಯವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು. ರಾಜ್ಯಪಾಲರನ್ನು ಕೇಂದ್ರ ಸರಕಾರ ನೇಮಕ ಮಾಡಿರುತ್ತದೆ. ಕೇಂದ್ರ ಸರಕಾರಕ್ಕೆ ದೋಷಣೆ ಮಾಡುವಂತಹ ವಿಷಯವನ್ನು ರಾಜ್ಯಪಾಲರ ಮೂಲಕ ಹೇಳುಸುತ್ತೇವೆ ಎಂದಾಗ ಸಂವಿಧಾನಿಕ ಬಿಕ್ಕಟ್ಟು ಉಂಟಾಗುತ್ತದೆ. ಇದನ್ನು ಸರಕಾರವೇ ಪರಿಹರಿಸಬಹುದು ಎಂದರು.






















