Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಆಕಸ್ಮಿಕ ಹೊತ್ತಿಕೊಂಡ ಬೆಂಕಿಗೆ ಹೊತ್ತಿ ಉರಿದ ಜೀಪು

ಆಕಸ್ಮಿಕ ಹೊತ್ತಿಕೊಂಡ ಬೆಂಕಿಗೆ ಹೊತ್ತಿ ಉರಿದ ಜೀಪು

0
209

ಬಳ್ಳಾರಿ: ಚಲಿಸುತ್ತಿದ್ದ ಬೊಲೇರೋ ಜೀಪಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬೆಂಕಿಗೆ ಸಂಪೂರ್ಣ ಜೀಪು ಆಹುತಿಯಾದ ಘಟನೆ ಇಲ್ಲಿನ ಗವಿಯಪ್ಪ ವೃತ್ತದ ಬಳಿ ಸೋಮವಾರ ನಡೆದಿದೆ.

ಸಂಡೂರು ತಾಲೂಕಿನ ತೋರಣಗಲ್ ಎಂ. ರಾಜು ಎಂಬುವವರ ಜೀಪು ಆಗಿದೆ. ತೋರಣಗಲ್‌ನಿಂದ ನಗರಕ್ಕೆ ಆಗಮಿಸುವ ವೇಳೆ ಇದ್ದಕ್ಕಿದಂತೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ವಾಹನದಲ್ಲಿದ್ದವರನ್ನು ಇಳಿಸಿದ್ದಾರೆ.

ಅದೃಷ್ಟವಶಾತ್ ಜೀಪಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿದ್ದಾರೆ. ಸಂಚಾರ ಠಾಣಾ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.