Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಆಕ್ಸಿಜನ್‌ ಸಿಲಿಂಡರ್‌ ಜತೆಯೇ ಪತ್ನಿಗೆ ದೈವದರ್ಶನ ಮಾಡಿಸಿದ ಪತಿ

ಆಕ್ಸಿಜನ್‌ ಸಿಲಿಂಡರ್‌ ಜತೆಯೇ ಪತ್ನಿಗೆ ದೈವದರ್ಶನ ಮಾಡಿಸಿದ ಪತಿ

0
121

ಚಿಕ್ಕೋಡಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಚಿಂಚಲಿ ಮಾಯಕ್ಕಾ ದೇವಿಯ ಜಾತ್ರೆ ನಡೆಯುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆಕ್ಸಿಜನ್ ಸಿಲಿಂಡರ್ ಸಮೇತ ಜಾತ್ರೆಗೆ ಬಂದು ಗಮನ ಸೆಳೆದಿದ್ದಾಳೆ.

ಮಹಾರಾಷ್ಟ್ರ ಮೂಲದ ಈ ಮಹಿಳೆ ಕಳೆದ ಹಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಚಿಂಚಲಿ ಮಾಯಕ್ಕಾ ದೇವಿ ದರ್ಶನ ಪಡೆಯುತ್ತಿದ್ದು, ಈ ಬಾರಿ ಅದು ಭಂಗವಾಗಬಾರದು ಎಂದು ಆಕ್ಸಿಜನ್ ಸಿಲಿಂಡರ್ ಸಮೇತ ಬಂದಿದ್ದಾಳೆ. ದೇವರ ಭಕ್ತಿಯ ಮುಂದೆ ಅನಾರೋಗ್ಯ ಯಾವುದೂ ಲೆಕ್ಕಕ್ಕೆ ಇಲ್ಲ ಎಂದು ಭಕ್ತಿ ಸಮರ್ಪಿಸಿದ್ದಾಳೆ.

ಇದನ್ನೂ ಓದಿ: ವಿಜಯನಗರ: ಐತಿಹಾಸಿಕ ಮೈಲಾರಲಿಂಗೇಶ್ವರನ ಈ ವರ್ಷದ ಕಾರ್ಣಿಕ

ಅಲ್ಲದೆ ತಾಯಿ ದರ್ಶನ ಪಡೆದುಕೊಂಡು ಕಾಯಿಲೆ ವಾಸಿ ಮಾಡು ಎಂದು ಭಕ್ತಿಯಿಂದ ಬೇಡಿಕೊಂಡಿದ್ದಾಳೆ. ಈಕೆಗೆ ಆಕ್ಸಿಜನ್ ಸಿಲಿಂಡರ್ ಹಿಡಿದು ಪತಿಯೂ ಸಾಥ್ ನೀಡಿದ್ದಾನೆ. ಇದೀಗ ಮಾಯಾಕ್ಕ ದೇವಿ ಜಾತ್ರೆ ಸಡಗರದಿಂದ ನಡೆಯುತ್ತಿದೆ.

ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಆಗಮಿಸುವ ಮಹಾರಾಷ್ಟ್ರದ ಭಕ್ತರು ಕಡ್ಡಾಯವಾಗಿ ಇಲ್ಲಿನ ಸುಕ್ಷೇತ್ರದ ಬಳಿ ಇರುವ ಹಾಲಹಳ್ಳಿಯಲ್ಲಿ ಪವಿತ್ರ ಸ್ನಾನ ಮಾಡಿ ಮಾಯಕ್ಕದೇವಿ ದರ್ಶನ ಪಡೆದು ಪುನೀತರಾಗುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

Previous articleಮೇಘನಾ ರಾಜ್: ಮತ್ತೇ ಬಣ್ಣದ ಲೋಕಕ್ಕೆ, ‘ಜೈಲರ್ 2’ ಸೀಕ್ವೆಲ್‌ಗೆ ಸಜ್ಜು!
Next articleಇ-ಮೇಲ್ ಹ್ಯಾಕ್: ಕಾರ್ಖಾನೆಗೆ 78 ಲಕ್ಷ ರೂ. ವಂಚನೆ