ಬೆಳಗಾವಿ: ಅತೀವೇಗ ಹಾಗೂ ನಿಷ್ಠಾಳಜಿತನದಿಂದ ಚಲಾಯಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದ್ದು, ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಬೆಂಗಳೂರು ಕೋರಮಂಗಲದ ಅಕ್ಷಯ ಅವರ ಪುತ್ರ ಹಿಯಾಂಶು (9) ಮೃತಪಟ್ಟಿದ್ದಾನೆ. ಅಕ್ಷಯ ಅವರ ಮತ್ತೋರ್ವ ಪುತ್ರ ಗುಣವ (10), ಅವರ ಗೆಳೆಯನ ಮಗಳು ಸವ್ಯಾ (10) ಸೇರಿದಂತೆ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಧಾರವಾಡ ಅಳ್ಳಾವರ – ರಾಮನಗರ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಅಳ್ಳಾವರ ಕಡೆಯಿಂದ ರಾಮನಗರದ ಕಡೆಗೆ ಹೊರಟಿದ್ದ ಕಿಯಾ ವಾಹನದ ಬಲಗಡೆ ಟೈಯರ್ ಒಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಬಗ್ಗೆ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























