Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ನೇಕಾರರ ಸಮಸ್ಯೆಗಳಿಗೆ ಸ್ಪಂದನೆ ಅಗತ್ಯ

ನೇಕಾರರ ಸಮಸ್ಯೆಗಳಿಗೆ ಸ್ಪಂದನೆ ಅಗತ್ಯ

0
23

ಅಭಯ ಮನಗೂಳಿ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಪ್ಪಿತ ದರ ಘೋಷಿಸಿರುವ ರಾಜ್ಯ ಸರ್ಕಾರ ನಾಲ್ಕು ವರ್ಷಗಳಲ್ಲಿ ಅದಕ್ಕೆ ಬೇಕಾಗಿರುವ ಮೊತ್ತವನ್ನು ಒದಗಿಸುವ ಭರವಸೆಯನ್ನು ನೀಡಿದೆ. ಅದರಂತೆ ಯಕೆಪಿ ಮೂರನೇ ಹಂತ ಪೂರ್ಣಗೊಳಿಸಲು 80 ಸಾವಿರ ಕೋಟಿ ರೂ. ಬೇಕಾಗಲಿದೆ ಎಂದು ಸರ್ಕಾರವೇ ಹೇಳಿರುವುದರಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸರಕಾರ 15 ರಿಂದ 20 ಸಾವಿರ ಕೋಟಿ ರೂ. ಗಳನ್ನಾದರೂ ಒದಗಿಸಬೇಕಾಗುತ್ತದೆ. ಅಷ್ಟು ಮೊತ್ತವನ್ನು ಸರ್ಕಾರ ನೀಡುವುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಅಲ್ಲದೇ ಹಿನ್ನೀರು ಬಳಸಿಕೊಂಡು ಹೊಸದಾಗಿ ಜಲಸಾರಿಗೆ, ಚಿಕ್ಕಸಂಗಮ ಬಳಿ ಪಕ್ಷಿಧಾಮಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕಿದೆ.

ಇದನ್ನೂ ಓದಿ: ಶಿರಸಿಯ ಈ ಯುವಕ 25ನೇ ವಯಸ್ಸಿನಲ್ಲೇ ನ್ಯಾಯಾಧೀಶ!

ಬಾದಾಮಿ, ಪಟ್ಟದಕಲ್ಲು, ಐಹೊಳೆ ಅಭಿವೃದ್ಧಿ, ಸ್ಮಾರಕಗಳ ಸುತ್ತಲಿನ ಮನೆಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಬೇಕಿದೆ. ನೇಕಾರರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದು, ಜವಳಿ ಉದ್ಯಮವೂ ಆಗಾಗ್ಗೆ ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ನೆರವಿಗೆ ಧಾವಿಸುವುದೇ, ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ 200 ಎಕರೆ ಪ್ರದೇಶದಲ್ಲಿ ಕೇಂದ್ರಿಕೃತ ಮಾರುಕಟ್ಟೆ ನಿರ್ಮಾಣ ಸೇರಿದಂತೆ ವಿಶೇಷ ಪ್ಯಾಕೇಜ್ ನಿರೀಕ್ಷೆ ಇದೆ. ಅಲ್ಲದೆ ಹಂಪಿ, ಚಾಲುಕ್ಯರು, ವಿಜಯಪುರವನ್ನು ಒಳಗೊಂಡು ಪ್ರವಾಸೋದ್ಯಮ ಅಭಿವೃದ್ಧಿಯೂ ಕನಸಾಗಿಯೇ ಉಳಿದಿದೆ.

ಜಿಲ್ಲೆಯ ಜನರ ನಿರೀಕ್ಷೆ ಏನು?

  • ಯುಕೆಪಿ ಭೂಸ್ವಾಧೀನ ರೈತರಿಗೆ ಪರಿಹಾರ ಚುರುಕು
  • ಸ್ಮಾರಕಗಳ ಸುತ್ತಲಿನ ಮನೆಗಳ ಸ್ಥಳಾಂತರಕ್ಕೆ ಅನುದಾನ
  • ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿ
  • ಚಿಕ್ಕಸಂಗಮ ಅಭಿವೃದ್ಧಿ, ಪಕ್ಷಿಧಾಮ, ಜಲಸಾರಿಗೆಗೆ ಒತ್ತು
  • ಪ್ರವಾಸೋದ್ಯಮ ಏರ್‌ಸ್ಟಿçಪ್ ನಿರ್ಮಾಣಕ್ಕೆ ಅಸ್ತು

ಸಿದ್ದು ಘೋಷಿಸಿದ್ದು ಏನಾಯ್ತು?

  • ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ
  • ರಬಕವಿ, ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಘೋಷಣೆ
  • ಬಾಗಲಕೋಟೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ ನೆನಗುದಿಗೆ
  • ಪ್ರವಾಸೋದ್ಯಮ ಸರ್ಕ್ಯೂಟ್ ಕನಸಾಗಿಯೇ ಉಳಿದಿದೆ.
  • ಬಾಗಲಕೋಟೆಯಲ್ಲಿ ಹೈಟೆಕ್ ಡೈರಿ ಕಟ್ಟಡ ಕಾರ್ಯಾ
Previous articleನೀರಾವರಿಗೆ ಹೆಚ್ಚು ಅನುದಾನ ನಿರೀಕ್ಷೆ
Next articleಮನೆ ಮಾಲೀಕ ಸೇರಿ ಇಬ್ಬರು ಉಸಿರುಗಟ್ಟಿ ಸಾವು