Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಬರ್ಬರ ಕೊಲೆ

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಬರ್ಬರ ಕೊಲೆ

0
41

ಬಾಗಲಕೋಟೆ: ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗದ್ದನಕೇರಿ ಕ್ರಾಸಿನಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ನಡೆದಿದೆ.

ಸಂಗಪ್ಪ ನಾಲತವಾಡ(45) ಕೊಲೆಯಾದ ದುರ್ದೈವಿ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಮುಖವನ್ನು ಜಜ್ಜಿ ಕೊಲೆಗೈದಿದ್ದಾರೆ. ಕೊಲೆಯಾದ ಸಂಗಪ್ಪ ಗದ್ದನಕೇರಿ ಗ್ರಾಪಂಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಪತ್ನಿ ಸಹ ಈಗಷ್ಟೇ ಮುಕ್ತಾಯಗೊಂಡ‌ ಗ್ರಾಪಂ ಅವಧಿಗೆ ಅಧ್ಯಕ್ಷರಾಗಿದ್ದರು. ಗದ್ದನಕೇರಿ ‌ಕ್ರಾಸ್‌ನಲ್ಲಿ ಬಾರವೊಂದನ್ನು ಲೀಸ್‌ಗೆ ಪಡೆದಿದ್ದರು.‌ ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಶಾಸಕ ಜೆ.ಟಿ.ಪಾಟೀಲ, ಎಸ್ಪಿ ಸಿದ್ದಾರ್ಥ ಗೋಯಲ್, ಡಿಎಸ್ಪಿ ಗಜಾನನ‌ ಸುತಾರ, ಗ್ರಾಮೀಣ ಸಿಪಿಐ ರಾಮಣ್ಣ ಬಿರಾದಾರ, ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಕೊಲೆಯಿಂದಾಗಿ ಆತಂಕ ಮನೆ ಮಾಡಿದೆ.