ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ಸುರಕ್ಷಿತ ಅಲ್ಲ

0
12
ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಹಿಂದೂಗಳಿಗೆ ಕರ್ನಾಟಕ ಸೇಫ್ ಅಲ್ಲ ಎನ್ನುವ ಭಾವನೆ ಬರುವ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ ಎಂದು ಬಿಜೆಪಿ ಮಾಜಿ ಸಚಿವ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಗಲಭೆ ವಿಚಾರವಾಗಿ ಮಾತನಾಡಿದ ಅವರು, ಸತ್ಯ ಶೋಧನ ಸಮಿತಿ ಶಿವಮೊಗ್ಗಗೆ ಹೋಗಿತ್ತು. ಅಲ್ಲಿನ ವಾಸ್ತವ ಪರಿಸ್ಥಿತಿ ಸಮಿತಿ ನೋಡಿದೆ. 6-7 ಕಾರು ಜಖಂ ಆಗಿದೆ. ಮನೆಗಳ ಗಾಜು ಒಡೆದು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ, ಜಿಲ್ಲಾಡಳಿತ 75 ಸಾವಿರ ರೂ. ನಷ್ಟ ಎಂದು ವರದಿ ಕೊಟ್ಟಿದೆ. ದೊಡ್ಡ ಗಲಾಟೆಯಾದರೂ ಏನು ಇಲ್ಲ ಎಂದು ತೋರಿಸಲು ಸರ್ಕಾರ ಹೊರಟಿದೆ. ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ಸುರಕ್ಷಿತ ಅಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

Previous articleKSRTC ಪ್ರಯಾಣಿಕರ ಸೇವೆಗೆ ಸಿದ್ದವಾದ ‘ಪಲ್ಲಕ್ಕಿ’
Next article4,860 ಕೋಟಿ ರೂ. ಪರಿಹಾರ ಕೋರಿದ ಸಿದ್ದರಾಮಯ್ಯ