ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಸರ್ವರ್ ತೊಂದರೆ

0
23
ಡಿಪ್ಲೋಮ್ :ಸರ್ವರ್‌ ತೊಂದರೆ

ಗದಗ: ಡಿಪ್ಲೋಮಾ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ ಶುಕ್ರವಾರ ಸಮರ್ಪಕವಾಗಿ ಲಾಗಿನ್ ಆಗದೇ ಸಾವಿರಾರು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗಿ ನಿರಾಶರಾದ ಸಂಗತಿ ಬೆಳಕಿಗೆ ಬಂದಿದೆ.
ಡಿಪ್ಲೋಮಾ ಪಾಸಾದವರಿಗೆ ಪರೀಕ್ಷಾ ಪ್ರಾಧಿಕಾರ ಸಿಇಟಿ ಪರೀಕ್ಷೆ ನಡೆಸಿ ಇಂಜಿನಿಯರಿಂಗ್ ಮೂರನೇ ಸೆಮಿಸ್ಟರಗೆ ಪ್ರವೇಶ ನೀಡುತ್ತದೆ. ಸಿಇಟಿಗೆ ಅರ್ಜಿ ಸಲ್ಲಿಸಲು ಶುಕ್ರವಾರ ರಾತ್ರಿ 11-59ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಧ್ಯಾಹ್ನ 1ರಸುಮಾರಿಗೆ ಸರ್ವರ್ ಸಮಸ್ಯೆಯಿಂದ ವೆಬ್‌ಪೇಜ್ ತೆರೆದುಕೊಳ್ಳದ ಸಮಸ್ಯೆಯಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮೊದಲಿಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾದ ನಂತರ ಆನ್‌ಲೈನ್‌ದಲ್ಲಿ ನಿಗದಿತ ಶುಲ್ಕ ಭರಿಸಲು ಚಲನ್ ತಯಾರಿಸಿಕೊಂಡು ಬ್ಯಾಂಕಿಗೆ ಸಂಜೆ 5.30ರೊಳಗೆ ಹಣ ಭರಿಸಲು ಪರಿಚಯ ಪತ್ರದಲ್ಲಿ ಸೂಚಿಸಲಾಗಿತ್ತು. ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡ ನಂತರ ಹಣ ಭರಿಸುವ ಚಲನ್ ತಯಾರಿಸಿಕೊಳ್ಳುವ ಹಂತದಲ್ಲಿ ವೆಬ್‌ಪೇಜ್ ಕೈಕೊಟ್ಟು ವಿದ್ಯಾರ್ಥಿಗಳು ಪರದಾಡುವಂತೆ ಮಾಡಿದೆ.

Previous articleಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ ಇನ್ನಿಲ್ಲ
Next articleದಕ್ಷಿಣ ಭಾರತದ ಮಹಾಕುಂಭಮೇಳದ ಲೋಗೋ ಬಿಡುಗಡೆ