ನಟ ದರ್ಶನ್‌ ಮೇಲೆ ಶೂ ಎಸೆತ ಪ್ರಕರಣ ಖಂಡನೀಯ

0
10

ವಿಜಯನಗರ: ಹೊಸಪೇಟೆಯಲ್ಲಿ ಕ್ರಾಂತಿ ಚಲನಚಿತ್ರದ ಹಾಡು ಬಿಡುಗಡೆ ವೇಳೆ ನಟ ದರ್ಶನ್ ಮೇಲೆ ನಡೆದ ಶೂ ಎಸೆತ ಪ್ರಕರಣವನ್ನು ಅಪ್ಪು ಅಭಿಮಾನಿಗಳು, ಕನ್ನಡಪರ, ರೈತ ಸಂಘಟನೆಗಳು, ದರ್ಶನ್ ಅಭಿಮಾನಿಗಳು ಖಂಡಿಸಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪುನೀತ್ ಅಭಿಮಾನಿಗಳ ಮೇಲೆ ವಿನಾಕಾರಣ ಆರೋಪ ಸಲ್ಲದು. ಆರೋಪಿ ಸಿಗುವವರೆಗೂ ಸಹಕಾರ ನೀಡಬೇಕು. ಅಪ್ಪು ಅಭಿಮಾನಿಗಳು ಸಹ ದರ್ಶನ್ ಬೆಂಬಲಕ್ಕಿದ್ದಾರೆ. ಕಾನೂನಿನ ಪ್ರಕಾರ ಶಿಕ್ಷೆಗೆ ಆಗ್ರಹಿಸುತ್ತೇವೆ. ಹೊಸಪೇಟೆಯನ್ನು ವಿನಾಕಾರಣ ದೂಷಿಸುವುದು ಬೇಸರ ತರಿಸಿದೆ ಎಂದರು.
ದರ್ಶನ್ ಅವರು ಬಂದಾಗ ನಾವೇ ಅವರನ್ನು ಸ್ವಾಗತ ಮಾಡಿದ್ದೇವೆ. ಪುನೀತ್ ರಾಜಕುಮಾರ್ ಪುತ್ಥಳಿಗೆ ಹೂವಿನ ಮಾಲೆ ಹಾಕಿಸಿದ್ದೇವೆ. ದಯಮಾಡಿ ಯಾರೋ ಒಬ್ಬರು ಮಾಡಿದ್ದಕ್ಕೆ ಇಡೀ ಹೊಸಪೇಟೆಗೆ ಕೆಟ್ಟ ಹೆಸರು ಬೇಡ. ಕಾನೂನು ಇದೆ, ಪೊಲೀಸರು ತಪ್ಪಿತಸ್ಥರನ್ನು ಪತ್ತೆ ಹಚ್ಚುತ್ತಾರೆ. ಯಾವುದೇ ಕಾರಣಕ್ಕೂ ಅಭಿಮಾನಿಗಳು ಟ್ರೋಲ್ ಮಾಡೋದು ಬೇಡ ಎಂದು ಮನವಿ ಮಾಡಿದರು.

Previous articleಕೋವಿಡ್ ನಿಯಮ ಪಾಲಿಸಿ, ಇಲ್ಲಾ ಜೋಡೋ ಯಾತ್ರೆ ನಿಲ್ಲಿಸಿ: ರಾಹುಲ್‌ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವರ ಪತ್ರ
Next articleಸದನದ ಕಲಾಪವನ್ನೇ ನುಂಗಿದ ಏಕವಚನ