Home Advertisement
Home ನಮ್ಮ ಜಿಲ್ಲೆ ಲೋಕಾಯುಕ್ತ ಬಲೆಗೆ ಬಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ

ಲೋಕಾಯುಕ್ತ ಬಲೆಗೆ ಬಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ

0
87
ಹಾವೇರಿ

ಹಾವೇರಿ: ಕಾಮಗಾರಿಗಳ ಬಿಲ್ಲನ್ನು ಮಂಜೂರಿಸಲು ಲಂಚ ಸ್ವೀಕಾರಿಸುತ್ತಿದ್ದಾಗ ಲೋಕಾಯುಕ್ತ ದಾಳಿಯಾಗಿದ್ದು, ಕೆರೆ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಯನ್ನು ಬಂಧಿಸಲಾಗಿದೆ.
ಶಿವಲಿಂಗಸ್ವಾಮಿ ತಂದೆ ಶಾಂತವೀರಸ್ವಾಮಿ ಹಲಗಲಿಮಠ, ಪ್ರಭಾರ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಲೋಕಾಯುಕ್ತ ಬಲೆಗೆ ಬಿದ್ದವರು.
2 ಲಕ್ಷ 20 ಸಾವಿರ ರೂ. ಗಳಿಗೆ ಬೇಡಿಕೆ ಇಟ್ಟು, 1 ಲಕ್ಷ ರೂ.ಗಳನ್ನು ಮುಂಗಡವಾಗಿ ಪಡೆದುಕೊಂಡಿದ್ದ ಈತ ಇಂದು ಉಳಿದ 1.20 ಲಕ್ಷ ರೂ.ಗಳನ್ನು ಪಡೆದುಕೊಳ್ಳುವಾಗ ಟ್ರ್ಯಾಪ್ ಆಗಿದ್ದಾನೆ. ಆರೋಪಿತನನ್ನು ಧಾರವಾಡ ಜಿಲ್ಲೆಯ ನವಲೂರಿನ ವಿನಾಯಕ ನಗರ 4ನೇ ಕ್ರಾಸ್‌ದಲ್ಲಿರುವ ಮನೆಯಲ್ಲಿ ದಸ್ತಗಿರಿ ಮಾಡಿದ್ದು, ಧಾರವಾಡ ಜಿಲ್ಲೆಯ ನವಲೂರಿನ ವಿನಾಯಕ ನಗರ 4ನೇ ಕ್ರಾಸ್‌ದಲ್ಲಿರುವ ಮನೆ ಹಾಗೂ ಹಾವೇರಿಯಲ್ಲಿರುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ಶೋಧನೆಯನ್ನು ಕೈಗೊಂಡು ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Previous articleಜೈಲಿನಿಂದ ನವಜೋತ್‌ಸಿಂಗ್‌ ಸಿಧು ಬಿಡುಗಡೆ
Next articleಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಡಿಶುಂ… ಡಿಶುಂ…