ವಿಶ್ವದಲ್ಲಿ ವಿನೂತನ ಮೊಬೈಲ್ ತಂತ್ರಜ್ಞಾನದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಇಡಲಾಗಿದೆ. ಮೊದಲ ಭಾರಿಗೆ ಟ್ರೈಫೋಲ್ಡ್ ಸ್ಮಾರ್ಟ್‌ಫೋನ್ ಸಿದ್ದಗೊಂಡಿದ್ದು ಅಧಿಕೃತವಾಗಿ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮೂರು ಬಾರಿ ಮಡಚಬಹುದಾದ ಈ ವಿಶಿಷ್ಟ ಸಾಧನವನ್ನು ಡಿಸೆಂಬರ್ 12ರಂದು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ನಂತರ ಕ್ರಮೇಣ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಮೊಬೈಲ್ ಕಂಪನಿ ತಿಳಿಸಿದೆ.
ಮೊದಲ ಮೂರು ಮಡಚುವ ಸ್ಮಾರ್ಟ್‌ಫೋನ್: ಫೋಲ್ಡೆಬಲ್ ತಂತ್ರಜ್ಞಾನದಲ್ಲಿ ದಶಕದ ಅನುಭವದ ಆಧಾರದ ಮೇಲೆ ವಿನ್ಯಾಸಗೊಳಿಸಿರುವ ಈ ಫೋನ್, ಒಂದೇ ಸಾಧನದಲ್ಲಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಮಿನಿ ಲ್ಯಾಪ್‌ಟಾಪ್ ಅನುಭವ ನೀಡಲಿರುವುದು ಪ್ರಮುಖ ವೈಶಿಷ್ಟ್ಯ. ತೆರೆದಾಗ 10 ಇಂಚಿನ ದೊಡ್ಡ ಡಿಸ್‌ಪ್ಲೇ ದೊರೆತು, ಕೆಲಸ, ಸಿನಿಮಾವೀಕ್ಷಣೆ ಮತ್ತು ಮಲ್ಟಿ–ಟಾಸ್ಕಿಂಗ್‌ಗೆ ಅತ್ಯಾಧುನಿಕ ಅನುಭವ ಒದಗಿಸುತ್ತದೆ.
ಮಲ್ಟಿಟಾಸ್ಕಿಂಗ್‌ಗೆ ಆದರ್ಶವಾಗಿ ಒಂದೇ ಸಮಯದಲ್ಲಿ ಮೂರು ರಿಂದ ನಾಲ್ಕು ವರ್ಕ್‌ಸ್ಪೇಸ್‌ಗಳಲ್ಲಿ ಅನೇಕ ಆ್ಯಪ್‌ಗಳನ್ನು ನಿರ್ವಹಿಸುವ ಅನುಕೂಲವಿದೆ. ಬಾಹ್ಯ ಮಾನಿಟರ್‌ಗೆ ಸಂಪರ್ಕಿಸಿ ಡೆಸ್ಕ್‌ಟಾಪ್ ಮಟ್ಟದ ಕೆಲಸದ ವಾತಾವರಣ ಸೃಷ್ಟಿಸಬಹುದು ಎಂದು ತಿಳಿಸಿದೆ
ಎಐ ಶಕ್ತಿಯ ಮೊಬೈಲ್ ಯುಗ: ನವೀಕೃತ ಎಐ ವೈಶಿಷ್ಟ್ಯಗಳು ಫೋಟೋಗ್ರಫಿ ಮತ್ತು ಕಂಟೆಂಟ್ ರಚನೆಗೆ ಹೊಸ ಆಯಾಮ ನೀಡಿದ್ದು ಡಿವೈಸ್ 10 ಇಂಚಿನ ತೆರೆದ ಡಿಸ್‌ಪ್ಲೇ ಮೂಲಕ ಜೇಬಿನಲ್ಲೇ ಸಿನಿಮಾ ಥಿಯೇಟರ್ ಅನುಭವ, ಯೂಟ್ಯೂಬ್ ವೀಕ್ಷಣೆ ವೇಳೆ ಪಕ್ಕದಲ್ಲೇ ಕಾಮೆಂಟ್ ಓದುವ ವ್ಯವಸ್ಥೆ ಮತ್ತು ಕಡಿಮೆ ಮಡಚು ಗುರುತು—ನಿರಂತರ ವೀಕ್ಷಣಾ ಅನುಭವ ನೀಡಲಿದೆ.
ಫೋನ್ ಬಿಡುಗಡೆಯಾದ ನಂತರ ಬೆಲೆ, ಕಲರ್ ಆಯ್ಕೆಗಳು ಮತ್ತು ಜಾಗತಿಕ ಬಿಡುಗಡೆ ದಿನಾಂಕಗಳ ವಿವರವನ್ನು ಡಿಸೆಂಬರ್ 12ರಂದು ದಕ್ಷಿಣ ಕೊರಿಯಾದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.























