ಬೆಂಗಳೂರು: ಸೋಶಿಯಲ್ ಮೀಡಿಯಾ ಮೂಲಕ ಮನೆಮಾತಾಗಿ, ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನಟಿ ರಕ್ಷಿತಾ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ತಮ್ಮ ಕನಸಿನ ‘ಪಟಾಕಿ ಕಿಚನ್’ ಎಂಬ ಹೋಟೆಲ್ ಉದ್ಯಮ ಆರಂಭಿಸಿದ್ದ ರಕ್ಷಿತಾ, ಇದೀಗ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ ‘ಕ್ವಾಟ್ಲಿ ಕಿಚನ್ ಸೀಸನ್ 2’ ರ ಉದ್ಘಾಟನಾ ಸಂಚಿಕೆಗೆ ವಿಶೇಷ ಅತಿಥಿಯಾಗಿ ಆಗಮಿಸಿ ಎಲ್ಲರನ್ನೂ ನಗಿಸಿದ್ದಾರೆ.
ಕಾರ್ಯಕ್ರಮದ ವೇಳೆ ರಕ್ಷಿತಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ತಟ್ಟೆಯಲ್ಲಿದ್ದ ಸತ್ತ ಮೀನನ್ನು ಪ್ರೀತಿಯಿಂದ ಮಾತನಾಡಿಸುತ್ತಾ, “ನಿನಗೆ ನಾನು ಅಂದ್ರೆ ತುಂಬ ಇಷ್ಟ ತಾನೇ?” ಎಂದು ಕೇಳುವ ದೃಶ್ಯ ಎಲ್ಲರ ಗಮನ ಸೆಳೆದಿದ್ದು, ಅಲ್ಲಿರುವಂತ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುಂತೆ ನಗಿಸಿದ್ದಾರೆ. ಈ ವಿಡಿಯೋ ಶೋನಲ್ಲಿ ಭಾರಿ ಸಂತಸದ ಹೊಸ ಅಲೆ ಎಬ್ಬಿಸಿದೆ.
ಇದೇ ಸಂದರ್ಭದಲ್ಲಿ ನಿರೂಪಕಿ ಸುಷ್ಮಾ ಹಾಸ್ಯಭರಿತ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ, “ನಾನು ಚಿಕನ್ ತರಲು ಅಂಗಡಿಗೆ ಹೋದಾಗ ಅಂಗಡಿಯವರೇ ಕೋಳಿಯನ್ನು ಕಟ್ ಮಾಡಿ ನನಗೆ ಕೊಡುತ್ತಾರೆ, ನಾನಂತೂ ಯಾವುದನ್ನೂ ಸಾಯಿಸುವುದಿಲ್ಲ” ಎಂದು ತಮ್ಮದೇ ಶೈಲಿಯಲ್ಲಿ ಉತ್ತರಿಸಿ ನೆರೆದಿದ್ದವರನ್ನು ರಂಜಿಸಿದರು.
ಸದ್ಯ ರಕ್ಷಿತಾ ಶೆಟ್ಟಿ ಈ ಮಜಾವಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ರಕ್ಷಿತಾಳ ಮುಗ್ಧತೆ ಹಾಗೂ ಹಾಸ್ಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಟಸ್ಥ ಭಾಷೆ ಮತ್ತು ಕರಾವಳಿ ಶೈಲಿಯ ಸಂಭಾಷಣೆಯಿಂದಲೇ ಜನಮನ ಗೆದ್ದಿದ್ದ ರಕ್ಷಿತಾ, ‘ಕ್ವಾಟ್ಲಿ ಕಿಚನ್’ನಲ್ಲೂ ತಮ್ಮ ಎಂದಿನ ಚಾರ್ಮ್ ಮುಂದುವರಿಸಿದ್ದಾರೆ.






















