Home Advertisement
Home ನಮ್ಮ ಜಿಲ್ಲೆ ಚಾಮರಾಜನಗರ ಚಿರತೆ ದಾಳಿಯಿಂದ ಬಾಲಕ ಸಾವು

ಚಿರತೆ ದಾಳಿಯಿಂದ ಬಾಲಕ ಸಾವು

0
44

ಚಾಮರಾಜನಗರ: ಚಿರತೆ ದಾಳಿಯಿಂದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.

ಬೆಂಗಳೂರಿನ ಲಗ್ಗೆರೆ ವಾರ್ಡ್‌ನ ನಿವಾಸಿ ಸುರೇಶ ಎಂಬವರ ಪುತ್ರ ಹರ್ಷಿತ್ (10) ಮೃತಪಟ್ಟ ಬಾಲಕ.

ಘಟನೆಯ ವಿವರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶ್ರೀಮಲೆ ಮಹದೇಶ್ವರ ಬೆಟ್ಟಕ್ಕೆ ಶನಿವಾರ ಕುಟುಂಬದವರೊಂದಿಗೆ ಬಂದಿದ್ದ ಬಾಲಕ ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಿ, ಭಾನುವಾರ ಬೆಳಗ್ಗೆ ನಾಗಮಲೆಗೆ ದೇವರ ದರ್ಶನಕ್ಕೆ ಕುಟುಂಬದ ಸುಮಾರು 15 ಮಂದಿ ಸದಸ್ಯರೊಂದಿಗೆ ಬಾಲಕ ತೆರಳುವಾಗ ಇಂಡಿಗನತ್ತ ಗ್ರಾಮದ ಬಳಿ ಏಕಾಏಕಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಜೊತೆಗಿದ್ದ ಕುಟುಂಬಸ್ಥರು ಜೋರಾಗಿ ಕಿರುಚಾಡಿದರೂ ಬಾಲಕನನ್ನು ಚಿರತೆ ಬಿಡದೆ ಪೊದೆಯೊಂದಕ್ಕೆ ಎಳೆದೊಯ್ದಿದೆ.

ಸುಮಾರು ಅರ್ಧ ತಾಸಿನ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದ್ದು, ಬಾಲಕನ ಕತ್ತು ಸೇರಿದಂತೆ ಅಂಗಾಂಗಳು ರಕ್ತ ಸಿಕ್ತವಾಗಿವೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.