Home Advertisement
Home ಸಿನಿ ಮಿಲ್ಸ್ ಹೊಸ ದಾಳ ಉರುಳಿಸಿದ ನಟ ದರ್ಶನ್ ಪರ ವಕೀಲರು; ಈ ಬಾರಿ ಪಕ್ಕಾ ಜೈಲಾ? ಬೇಲಾ?...

ಹೊಸ ದಾಳ ಉರುಳಿಸಿದ ನಟ ದರ್ಶನ್ ಪರ ವಕೀಲರು; ಈ ಬಾರಿ ಪಕ್ಕಾ ಜೈಲಾ? ಬೇಲಾ? ಡಿಸೈಡ್!

0
65

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರಿಗೆ ಸದ್ಯಕ್ಕೆ ಜೈಲೇ ಗತಿಯಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್, ಕಳೆದ ಹಲವು ತಿಂಗಳುಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಅವರನ್ನು ಮತ್ತೆ ಬಂಧಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಹೊರಬರಲು ಅವರು ನಡೆಸುತ್ತಿರುವ ಪ್ರಯತ್ನಗಳು ಫಲ ನೀಡಿಲ್ಲ.

ಈಗ ದರ್ಶನ್ ಪರ ವಕೀಲರು ಹೊಸದೊಂದು ದಾಳ ಉರುಳಿಸಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಏಪ್ರಿಲ್ 14ರಂದು ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಪರವಾಗಿ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಅರ್ಜಿಯಲ್ಲಿ ಪ್ರಮುಖವಾಗಿ ‘ಸಾಕ್ಷ್ಯ ವಿಚಾರಣೆ ವಿಳಂಬ’ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ತನಿಖೆ ಮತ್ತು ಸಾಕ್ಷಿಗಳ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ, ಸುದೀರ್ಘ ಕಾಲ ಜೈಲಿನಲ್ಲಿರುವುದು ಸರಿಯಲ್ಲ ಎಂಬ ವಾದವನ್ನು ಮಂಡಿಸಲು ದರ್ಶನ್ ತಂಡ ಸಜ್ಜಾಗಿದೆ.

ಇದನ್ನು ಓದಿ: http://Toxic ಮುಂದೂಡಿಕೆ : “ಕೆಲವು ಕಥೆಗಳು ತಾಳ್ಮೆ ಕೇಳುತ್ತವೆ” – ಯಶ್

ಬೆಂಗಳೂರಿನ ಪರಪ್ಪನ ಅಗ್ರಹಾರದ ಕತ್ತಲ ಕೋಣೆಯಲ್ಲಿ ದಿನ ಕಳೆಯುತ್ತಿರುವ ದರ್ಶನ್ ಅವರಿಗೆ ಈ ಅರ್ಜಿ ಈಗ ದೊಡ್ಡ ಭರವಸೆಯಾಗಿದೆ. ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕರೂ ಸುಪ್ರೀಂಕೋರ್ಟ್ ಅದನ್ನು ತಡೆಹಿಡಿದಿದ್ದರಿಂದ, ಈ ಬಾರಿ ಅತ್ಯುನ್ನತ ನ್ಯಾಯಾಲಯದ ಮುಂದೆ ಅತ್ಯಂತ ಬಲವಾದ ವಾದಗಳನ್ನು ಮಂಡಿಸಬೇಕಾದ ಅನಿವಾರ್ಯತೆ ಅವರಿಗಿದೆ.

ಮೂಲಗಳ ಪ್ರಕಾರ, ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ‘ವಿಳಂಬ’ದ ಕಾರಣವನ್ನು ಪುರಸ್ಕರಿಸಿದರೆ ದರ್ಶನ್ ಹೊರಬರಬಹುದು, ಇಲ್ಲವಾದಲ್ಲಿ ಮತ್ತಷ್ಟು ದಿನ ಅವರು ಜೈಲು ಪಾಲಾಗುವುದು ಖಚಿತ. ಇಡೀ ಚಿತ್ರರಂಗ ಮತ್ತು ಅಭಿಮಾನಿಗಳು ಈ ವಿಚಾರಣೆಯ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.