Home Advertisement
Home ಸಿನಿ ಮಿಲ್ಸ್ ದೀಪಿಕಾ-ರಣವೀರ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಹೊಸ ಅತಿಥಿ; ಒಂದೇ ವರ್ಷದಲ್ಲಿ ಎರಡು ಲಕ್!

ದೀಪಿಕಾ-ರಣವೀರ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಹೊಸ ಅತಿಥಿ; ಒಂದೇ ವರ್ಷದಲ್ಲಿ ಎರಡು ಲಕ್!

0
56

ಒಂದೆಡೆ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ ಇತಿಹಾಸವನ್ನೇ ಬುಡಮೇಲು ಮಾಡುತ್ತಾ ಹೊಸ ದಾಖಲೆ ಬರೆಯುತ್ತಿದ್ದರೆ, ಇತ್ತ ಅವರ ಪತ್ನಿ ದೀಪಿಕಾ ಪಡುಕೋಣೆ 2026ರ ಅತ್ಯಂತ ದೊಡ್ಡ ಸುದ್ದಿಯನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ದೀಪಿಕಾ ಅತ್ಯಂತ ವಿಭಿನ್ನವಾಗಿ ಮತ್ತು ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಮಗಳು ‘ದುವಾ’ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಹಿಡಿದಿರುವ ಸುಂದರವಾದ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ, ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿರುವುದನ್ನು ಅವರು ಖಚಿತಪಡಿಸಿದ್ದಾರೆ.

2012ರಲ್ಲಿ ‘ರಾಮ್-ಲೀಲಾ’ ಸಿನಿಮಾದ ಸೆಟ್‌ನಲ್ಲಿ ಶುರುವಾದ ಇವರ ಪ್ರೇಮಕಥೆ, 2018ರಲ್ಲಿ ಇಟಲಿಯ ಲೇಕ್ ಕೋಮೋದಲ್ಲಿ ಅದ್ಧೂರಿ ಮದುವೆಯಾಗಿ ಬದಲಾಗಿತ್ತು. ನಂತರ 2024ರ ಫೆಬ್ರವರಿಯಲ್ಲಿ ತಮ್ಮ ಮೊದಲ ಮಗುವಿನ ಘೋಷಣೆ ಮಾಡಿದ್ದ ಈ ಜೋಡಿ, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಮಗಳು ‘ದುವಾ’ಳನ್ನು ಬರಮಾಡಿಕೊಂಡಿದ್ದರು. ಮಗಳ ಹೆಸರಿನ ಅರ್ಥ ‘ಪ್ರಾರ್ಥನೆ’ ಎಂದಾಗಿದ್ದು, ಈಗ ಆಕೆಯ ಜೊತೆಗೇ ಎರಡನೇ ಮಗುವಿನ ಸುದ್ದಿಯನ್ನು ಹಂಚಿಕೊಂಡಿರುವುದು ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಸದಾ ತಮ್ಮ ಖಾಸಗಿ ಬದುಕನ್ನು ರಹಸ್ಯವಾಗಿಡುತ್ತಿದ್ದ ಈ ದಂಪತಿ, ಈಗ ಇಡೀ ಜಗತ್ತಿನೊಂದಿಗೆ ಈ ಸಂತೋಷವನ್ನು ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ವೈಯಕ್ತಿಕ ಜೀವನದ ಈ ಸಂಭ್ರಮದ ನಡುವೆಯೇ ರಣವೀರ್ ಸಿಂಗ್ ವೃತ್ತಿಜೀವನದಲ್ಲೂ ಅತಿದೊಡ್ಡ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾ 2025ರ ಕೊನೆಯಲ್ಲಿ 1,000 ಕೋಟಿ ರೂಪಾಯಿ ಗಳಿಸಿ ದಾಖಲೆ ನಿರ್ಮಿಸಿತ್ತು. ಈಗ ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೆಂಜ್’ ಬರೋಬ್ಬರಿ 1,730 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಪಟ್ಟಿಗೆ ಸೇರಿದೆ. ಒಟ್ಟಿನಲ್ಲಿ ರಣವೀರ್ ಸಿಂಗ್ ಅವರಿಗೆ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಸಿಕ್ಕರೆ, ಇತ್ತ ದೀಪಿಕಾ ಅವರ ಈ ‘ಗುಡ್ ನ್ಯೂಸ್’ ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.