Home Advertisement
Home ಸುದ್ದಿ ದೇಶ ಪುಣೆ ವಿಮಾನ ನಿಲ್ದಾಣ: ವಿಮಾನ ಕಾರ್ಯಾಚರಣೆ ಪುನರಾರಂಭ

ಪುಣೆ ವಿಮಾನ ನಿಲ್ದಾಣ: ವಿಮಾನ ಕಾರ್ಯಾಚರಣೆ ಪುನರಾರಂಭ

0
85

ಪುಣೆ: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ತಡರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗಿತ್ತು. ಇಂದು ಹಂತ ಹಂತವಾಗಿ ವಿಮಾನ ನಿಲ್ದಾಣ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ.

ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್-30 MKI ಯುದ್ಧ ವಿಮಾನವು ಏಪ್ರಿಲ್ 17ರಂದು ರಾತ್ರಿ ಸುಮಾರು 10:25ಕ್ಕೆ ತಾಂತ್ರಿಕ ದೋಷದಿಂದಾಗಿ ‘ಹಾರ್ಡ್ ಲ್ಯಾಂಡಿಂಗ್’ ಮಾಡಿದೆ. ವಿಮಾನದ ಲ್ಯಾಂಡಿಂಗ್ ಗೇರ್ (undercarriage) ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಪೈಲಟ್‌ಗಳು ಸುರಕ್ಷಿತ : ವಿಮಾನದಲ್ಲಿದ್ದ ಪೈಲಟ್‌ಗಳು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದು, ನಾಗರಿಕ ಆಸ್ತಿಗೆ ಯಾವುದೇ ಹಾನಿ ಆಗಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.

ವಿಮಾನ ಸಂಚಾರದ ಮೇಲೆ ಪರಿಣಾಮ: ಈ ತುರ್ತು ಲ್ಯಾಂಡಿಂಗ್‌ನಿಂದ ರನ್‌ವೇ ತಾತ್ಕಾಲಿಕವಾಗಿ ಬಂದ್ ಆಗಿತ್ತು ಇದರಿಂದ 80ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾತ್ತು, ಕನಿಷ್ಠ 8 ರಿಂದ 30ಕ್ಕೂ ಹೆಚ್ಚು ವಿಮಾನಗಳ ದಿಕ್ಕು ಬದಲಾವಣೆಯಾಗಿವೆ. ವಿಮಾನಗಳನ್ನು ಸೂರತ್ ವಿಮಾನ ನಿಲ್ದಾಣ, ಮೋಪಾ ವಿಮಾನ ನಿಲ್ದಾಣ, ಮುಂಬೈ ವಿಮಾನ ನಿಲ್ದಾಣ ಹಾಗೂ ನವಿ ಮುಂಬೈ ಕಡೆಗೆ ತಿರುಗಿಸಲಾಗಿತ್ತು.

ವಿಮಾನ ಸಂಚಾರ ಪುನರಾರಂಭ: ರನ್‌ವೇ ಮೇಲೆ ಸಿಲುಕಿದ್ದ ಯುದ್ಧ ವಿಮಾನವನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದ್ದು, ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ. ಬೆಳಿಗ್ಗೆ 7:30ರಿಂದ ನಿರ್ಗಮನ ಆರಂಭವಾಗಿದ್ದು (Departures), 8:00ರಿಂದ ಆಗಮನ (Arrivals) ಆರಂಭವಾಗಿದೆ. ವಿಮಾನ ಸೇವೆಗಳು ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ.