Home Advertisement
Home ಸಿನಿ ಮಿಲ್ಸ್ ರಾಕಿಂಗ್ ಸ್ಟಾರ್ ಯಶ್-ರಣಬೀರ್ ಕಪೂರ್ ಕಾಂಬಿನೇಶನ್‌ನ ‘ರಾಮಾಯಣ’ ರಿಲೀಸ್ ಡೇಟ್ ಫಿಕ್ಸ್!

ರಾಕಿಂಗ್ ಸ್ಟಾರ್ ಯಶ್-ರಣಬೀರ್ ಕಪೂರ್ ಕಾಂಬಿನೇಶನ್‌ನ ‘ರಾಮಾಯಣ’ ರಿಲೀಸ್ ಡೇಟ್ ಫಿಕ್ಸ್!

0
32

ಸಿನಿ ಸ್ಯಾಂಡಲ್‌ವುಡ್‌ ನಟ, ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಚಂದನವನಕ್ಕೆ ಸೀಮಿತವಾಗಿಲ್ಲ, ಖ್ಯಾತಿ ಜಾಗತಿಕ ಮಟ್ಟಕ್ಕೂ ತಲುಪಿದೆ. ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಸಿನಿಮಾಕಾನ್ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಕುರಿತು ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಹಾಗೇ ನಮಿತ್ ಮಲ್ಲೋತ್ರಾ ಜೊತೆಗೆ ವೇದಿಕೆ ಹಂಚಿಕೊಂಡ ಯಶ್, ಚಿತ್ರದ ಬಿಡುಗಡೆಯ ಬಗ್ಗೆ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಮೊದಲು ಚಿತ್ರವು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದ್ರೆ ಪ್ರಚಾರದ ವೇಳೆ ಮಾತನಾಡಿದ ಯಶ್, “ರಾಮಾಯಣ ಚಿತ್ರವು ಅಕ್ಟೋಬರ್ ಕೊನೆಯ ವಾರದಲ್ಲಿಯೇ ತೆರೆಮೇಲೆ ಬರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಸಂಭ್ರಮವನ್ನು ಮುಂಚಿತವಾಗಿಯೇ ನೀಡಲು ಚಿತ್ರತಂಡ ಸಜ್ಜಾಗಿದೆ.

ನಂತರ ಚಿತ್ರದ ಸತ್ವದ ಬಗ್ಗೆ ಮಾತನಾಡಿದ ಯಶ್, “ರಾಮಾಯಣ ಎಂಬುದು ಕೇವಲ ಒಂದು ಕಥೆಯಲ್ಲ, ಅದೊಂದು ಅದ್ಭುತ ಅನುಭವ. ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹ ವಿಶಿಷ್ಟವಾದ ಸತ್ವ ಇದರಲ್ಲಿದೆ. ಸಿನಿಮಾ ನೋಡುವಾಗ ಪ್ರೇಕ್ಷಕರು ಸಂಪೂರ್ಣವಾಗಿ ಆ ಲೋಕದಲ್ಲಿ ಮೀಯುವಂತಹ ಅನುಭವವನ್ನು ನಾವು ನೀಡಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಚಿತ್ರವು ಭಾರತೀಯ ಚಿತ್ರರಂಗದ ಅತಿದೊಡ್ಡ ತಾರಾಗಣವನ್ನು ಹೊಂದಿದೆ. ಶ್ರೀರಾಮನ ಪಾತ್ರದಲ್ಲಿ ʻರಣಬೀರ್ ಕಪೂರ್ʼ ಕಾಣಿಸಿಕೊಂಡರೆ, ಲಂಕೇಶ್ವರ ರಾವಣನಾಗಿ ʻಯಶ್ʼ ಅಬ್ಬರಿಸಲಿದ್ದಾರೆ. ಸೀತೆಯಾಗಿ ʻಸಾಯಿ ಪಲ್ಲವಿʼ, ಹನುಮಂತನಾಗಿ ಬಾಲಿವುಡ್ ನಟ ʻಸನ್ನಿ ಡಿಯೋಲ್ʼ ಮತ್ತು ಲಕ್ಷ್ಮಣನ ಪಾತ್ರದಲ್ಲಿ ʻರವಿ ದುಬೆʼ ನಟಿಸಿದ್ದಾರೆ.

ಒಟ್ಟಾರೆ.. ಪ್ರೈಮ್ ಫೋಕಸ್ ಸ್ಟುಡಿಯೋಸ್, ಜಾಗತಿಕ ಮಟ್ಟದ ವಿಎಫ್‌ಎಕ್ಸ್ ಸಂಸ್ಥೆ ‘ಡಿಎನ್‌ಇಜಿ’ (DNEG) ಮತ್ತು ಯಶ್ ಸ್ವಂತ ಸಂಸ್ಥೆ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌’ ಜಂಟಿಯಾಗಿ ಈ ಬೃಹತ್ ಚಿತ್ರವನ್ನು ನಿರ್ಮಿಸುತತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಅಲ್ಲದೆ ಮೊದಲ ಭಾಗವು ಈ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾದರೆ, ಚಿತ್ರದ ಎರಡನೇ ಭಾಗವು 2027ರ ದೀಪಾವಳಿಗೆ ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಸುದ್ದಿಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾದ ಶಕ್ತಿ ಪ್ರದರ್ಶಿಸಲು ಯಶ್ ಸಜ್ಜಾಗಿದ್ದಾರೆ.