Home Advertisement
Home ಸುದ್ದಿ ದೇಶ CA ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

CA ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

0
105

ನವದೆಹಲಿ: ಭಾರತದ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಪರೀಕ್ಷೆಗಳಲ್ಲೊಂದಾದ ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಪ್ರಕಟಣೆ ಪ್ರಕಾರ, 2026ರಿಂದ ಸಿಎ ಫೈನಲ್ ಪರೀಕ್ಷೆಗಳು ವರ್ಷಕ್ಕೆ ಎರಡು ಬಾರಿ ಮಾತ್ರ ನಡೆಯಲಿವೆ.

ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ: ಇದುವರೆಗೆ ಸಿಎ ಫೈನಲ್ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಬಾರಿ (ಜನವರಿ, ಮೇ ಮತ್ತು ಸೆಪ್ಟೆಂಬರ್) ನಡೆಸುವ ವ್ಯವಸ್ಥೆ ಇತ್ತು. ಆದರೆ ಇದೀಗ ಜನವರಿ ಸೈಕಲ್ ಅನ್ನು ರದ್ದುಪಡಿಸಿ, ಇನ್ನು ಮುಂದೆ ಕೇವಲ ಮೇ ಹಾಗೂ ನವೆಂಬರ್ ಈ ಎರಡು ತಿಂಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ICAI ಪ್ರಕಾರ, ಜನವರಿ 2026ರ ಪರೀಕ್ಷೆ ಈ ಹಿಂದಿನ ವ್ಯವಸ್ಥೆಯ ಕೊನೆಯ ಸೈಕಲ್ ಆಗಿರುತ್ತದೆ.

ವಿದ್ಯಾರ್ಥಿಗಳಿಗೆ ಏನು ಲಾಭ?: ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಸಮರ್ಪಕ ತಯಾರಿ ಸಮಯ ಸಿಗಲಿದೆ ಎಂದು ICAI ತಿಳಿಸಿದೆ. ಪರೀಕ್ಷಾ ವೇಳಾಪಟ್ಟಿಯಲ್ಲಿ ನಿರಂತರ ಬದಲಾವಣೆಗಳಿಂದ ಉಂಟಾಗುತ್ತಿದ್ದ ಗೊಂದಲಕ್ಕೂ ಇದು ತೆರೆ ಎಳೆಯಲಿದೆ.

ಇಂಟರ್ಮೀಡಿಯೇಟ್ ಪರೀಕ್ಷೆಗಳಿಗೂ ಬದಲಾವಣೆ: ಮೇ 3, 2026ರಿಂದ ಆರಂಭವಾಗಬೇಕಿದ್ದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗಳ ವೇಳಾಪಟ್ಟಿಯನ್ನೂ ದೇಶದಾದ್ಯಂತ ಮರುಹೊಂದಿಸಲಾಗಿದೆ. ವಿದ್ಯಾರ್ಥಿಗಳು ಹೊಸ ವೇಳಾಪಟ್ಟಿಯನ್ನು ಗಮನಿಸಬೇಕೆಂದು ICAI ಸೂಚಿಸಿದೆ.

ICAI ಸ್ಪಷ್ಟನೆ : ICAI ಪ್ರಕಟಣೆಯ ಪ್ರಕಾರ, ಈ ನಿರ್ಧಾರವನ್ನು ವಿದ್ಯಾರ್ಥಿಗಳ ಅಭಿಪ್ರಾಯ, ಸ್ಟೇಕ್‌ಹೋಲ್ಡರ್‌ಗಳ ಸಲಹೆಗಳು ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸ್ಥಿರತೆ ತರಬೇಕಾದ ಅಗತ್ಯಗಳನ್ನು ಪರಿಗಣಿಸಿ ಕೈಗೊಳ್ಳಲು ಇದು ಪ್ರಮುಖ ಹೆಜ್ಜೆಯಾಗಿದೆ.