ಹುಬ್ಬಳ್ಳಿಯ ಸಮೀರ್ ಮುಲ್ಲಾ ಕೇಸ್ ಕ್ಷಣ ಕ್ಷಣಕ್ಕೂ ಹೊಸ ಟ್ವಿಸ್ಟ್ ಪಡೆಯುತ್ತಿದೆ. ಹತ್ತಾರು ಆರೋಪಗಳು, ಲವ್ ಜಿಹಾದ್ ಪ್ರಕರಣ, ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳ ನಡುವೆಯೇ, ಈ ಪ್ರಕರಣವು ದಿನದಿಂದ ದಿನಕ್ಕೆ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಜಿಮ್ ಟ್ರೈನರ್ ಸಮೀರ್ ಮುಲ್ಲಾ ಹಿಂದೂ ಯುವತಿಯರನ್ನು ಪರಿಚಯಿಸಿಕೊಂಡು ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ ಎಂಬ ಆರೋಪಕ್ಕೆ ಸಾಕ್ಷಿ ನೀಡುವಂತೆ, ಹಲವಾರು ವಿಡಿಯೋಗಳು ಆತನ ಮೊಬೈಲ್‌ನಲ್ಲಿ ಲಭ್ಯವಾಗಿರುವುದಾಗಿ ಹೇಳಲಾಗಿದೆ.
ಆ ಘಟನೆಯ ನಡುವೆಯೇ, ಸಮೀರ್ ಮುಲ್ಲಾ ಸಹೋದರಿ ತೈಸೀಮ್ ಮುಲ್ಲಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಮೀರ್ ಮತ್ತು ಖುಷಿ ಕಳೆದ ಮೂರು ವರ್ಷಗಳಿಂದ ಪರಿಚಯದಲ್ಲಿದ್ದಾರೆ. ಅವರು ರಿಲೇಶನ್‌ಶಿಪ್‌ನಲ್ಲಿ ಇದ್ದರು. ಲವ್ ಜಿಹಾದ್ ಎನ್ನೋದನ್ನು ತಲೆಯಿಂದ ಕಿತ್ತುಹಾಕಿ. ಅವಳ ಫೋನ್ ಬೇಕಿದ್ರೆ ನೋಡಿ. ಅವರಿಬ್ಬರೂ ಸಿಕ್ಕಾಪಟ್ಟೆ ಸುತ್ತಾಡಿದ್ದಾರೆ. ಅದನ್ನೆಲ್ಲಾ ಅವಳೇ ವಿಡಿಯೋ ಮಾಡಿಟ್ಟುಕೊಂಡಿದ್ದಾಳೆ. ಇದರಲ್ಲಿ ಲವ್ ಜಿಹಾದ್, ಗಿಹಾದ್ ಏನೂ ಇಲ್ಲ. ಯುವತಿಯ ಕುಟುಂಬದವರೊಂದಿಗೆ ನಮ್ಮ ಕುಟುಂಬ ಅನ್ಯೋನ್ಯವಾಗಿದ್ದು, ಒಟ್ಟಿಗೆ ಪ್ರವಾಸ ಹಾಗೂ ಶಾಪಿಂಗ್ ಕೂಡ ಮಾಡುತ್ತಿದ್ದೆವು ಎಂದಿದ್ದಾರೆ.
ಇನ್ನೊಂದೆಡೆ, ಎಸ್‌ಎಸ್‌ಕೆ ಸಮಾಜದ ಕೆಲವರು ಬೆಳಗ್ಗೆ 7 ಗಂಟೆಗೆ ಸಮೀರ್‌ರನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ತೈಸೀಮ್ ಮುಲ್ಲಾ ಹೇಳಿಕೆಯಲ್ಲಿ ಉಲ್ಲೇಖವಾಗಿದೆ. ಸುಮಾರು ನೂರು ಜನರು ಸೇರಿ ದನದ ಶೆಡ್‌ಗೆ ಕರೆದುಕೊಂಡು ಹಲ್ಲೆ ನಡೆಸಿದದ್ದಾಗಿ ಅವರು ಹೇಳಿದರು. ಈ ವೇಳೆ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿಸಿದಂತೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ.
ನೇರ ಪ್ರಸಾರದಲ್ಲಿ ಸಮೀರ್ ಹೇಳಿದ್ದು, “ಖುಷಿ ತುಂಬಾ ಒಳ್ಳೆಯ ಹುಡುಗಿರಿ. ಅವಳು ಒತ್ತಡಕ್ಕೆ ಬಂದು ಹೀಗೆ ಹೇಳಿಕೆ ನೀಡಿದಿರಬಹುದು. ಅವಳ ಫೋನ್ ಪರಿಶೀಲಿಸಬಹುದು. ನನ್ನ ಮೊಬೈಲ್‌ನಲ್ಲಿ ಒಂದೇ ಒಂದು ವಿಡಿಯೋ ಕೂಡ ಇಲ್ಲ. ಅವಳ ಮೊಬೈಲ್ ಪರಿಶೀಲಿಸಿದರೆ ಯಾರು ಏನು ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಪ್ರಜ್ಞೆ ತಪ್ಪಿಸಿದ್ರೆ ಅವಳು ಮೊದಲು ಮಲಗಬೇಕಿತ್ತು. ಅವಳೇ ಮೊದಲು ಮಲಗಿದ್ರೆ ಅವಳ ಫೋನ್‌ನಲ್ಲಿ ವಿಡಿಯೋ ಹೇಗೆ ರೆಕಾರ್ಡ್ ಆಗಿದೆ ಎಂದು ಪ್ರಶ್ನಿಸಿದ್ದಾನೆ. ಅವಳು ಯಾವುದೊ ಒತ್ತಡದ ಪ್ರಭಾವದಲ್ಲಿ ಇಂಥ ಹೇಳಿಕೆ ನೀಡುತ್ತಿದ್ದಾಳೆ” ಎಂದು ಸಮೀರ್ ಹೇಳಿದ್ದಾನೆ.






















