Home Advertisement
Home ಸುದ್ದಿ ದೇಶ ಮೈತ್ರಿ ಕುರಿತ ಊಹಾಪೋಹ ತಳ್ಳಿಹಾಕಿದ TVK

ಮೈತ್ರಿ ಕುರಿತ ಊಹಾಪೋಹ ತಳ್ಳಿಹಾಕಿದ TVK

0
93

ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆ: TVK ಎನ್‌ಡಿಎ ಮೈತ್ರಿ ನಿರಾಕರಣೆ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮೈತ್ರಿ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ನಟ ವಿಜಯ ನೇತೃತ್ವದ Tamilaga Vettri Kazhagam (ಟಿವಿಕೆ) ಸ್ಪಷ್ಟನೆ ನೀಡಿದ್ದು, National Democratic Alliance (ಎನ್‌ಡಿಎ) ಜೊತೆ ಮೈತ್ರಿ ಮಾಡುವ ಯಾವುದೇ ಅವಕಾಶವಿಲ್ಲ ಎಂದು ಹೇಳಿದೆ.

ಶನಿವಾರ ಪ್ರಕಟಿಸಿದ ಹೇಳಿಕೆಯಲ್ಲಿ ಪಕ್ಷದ ಜಂಟಿ ಪ್ರಧಾನ ಕಾರ್ಯದರ್ಶಿ CTR ನಿರ್ಮಲ್‌ ಕುಮಾರ್‌, ಎನ್‌ಡಿಎ ಜೊತೆ ಚುನಾವಣಾ ಒಪ್ಪಂದದ ಸಾಧ್ಯತೆಯ ಕುರಿತಾಗಿ ಹರಿದಾಡುತ್ತಿರುವ ವರದಿಗಳನ್ನು ಮಾಧ್ಯಮಗಳ ಊಹಾಪೋಹ ಮತ್ತು ವದಂತಿಗಳು ಎಂದು ತಳ್ಳಿಹಾಕಿದ್ದಾರೆ.

ಬಿಜೆಪಿ ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ : ಟಿವಿಕೆ ಪಕ್ಷವು ಬಿಜೆಪಿಯನ್ನು ತನ್ನ ಸೈದ್ಧಾಂತಿಕ ವಿರೋಧಿ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ನಿರ್ಮಲ್ ಕುಮಾರ್ ಹೇಳಿದ್ದಾರೆ. “ಎನ್‌ಡಿಎ ಜೊತೆ ಮೈತ್ರಿ ಮಾಡುವ ಯಾವುದೇ ಪ್ರಶ್ನೆಯೇ ಇಲ್ಲ. ಬಿಜೆಪಿ ನಮ್ಮ ಸೈದ್ಧಾಂತಿಕ ಶತ್ರು ಎಂಬುದನ್ನು ನಾವು ಈಗಾಗಲೇ ಹೇಳಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ವರ್ಚುವಲ್ ಸಭೆ : ಮಾರ್ಚ್ 13ರಂದು ಪಕ್ಷದ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಪಕ್ಷದ ಬಲಾಬಲ ಹಾಗೂ ಮುಂದಿನ ಚುನಾವಣೆಯ ತಂತ್ರಗಳ ಕುರಿತು ಚರ್ಚಿಸಲಾಗಿದೆ. ಈ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌ ಆನಂಧ ಅವರಿಗೆ, ಮೈತ್ರಿಕೂಟದೊಂದಿಗೆ ಚುನಾವಣೆ ಎದುರಿಸಿದರೆ ಪಕ್ಷದ ಗೆಲುವಿನ ಸಾಧ್ಯತೆ ಹೆಚ್ಚಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವತಂತ್ರ ಸ್ಪರ್ಧೆ: ನಟ ವಿಜಯ್ ಅವರು ತಮ್ಮ ಪಕ್ಷವು 2026ರ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಮತ್ತು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರನೇ ಶಕ್ತಿ: ಟಿವಿಪಿ ಪಕ್ಷವು ಡಿಎಂಕೆ (DMK) ಮತ್ತು ಬಿಜೆಪಿ (BJP) ಎರಡನ್ನೂ ತನ್ನ ರಾಜಕೀಯ ವಿರೋಧಿಗಳೆಂದು ಪರಿಗಣಿಸಿದ್ದು, ತಮಿಳುನಾಡಿನಲ್ಲಿ ಹೊಸ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವ ಗುರಿ ಹೊಂದಿದೆ.