Home Advertisement
Home ಸುದ್ದಿ ದೇಶ ವಿಮಾನ ಪ್ರಯಾಣಿಕರಿಗೆ ಮತ್ತೊಂದು ಹೊಡೆತ:IndiGo ಹೊಸ ದರ ಜಾರಿ

ವಿಮಾನ ಪ್ರಯಾಣಿಕರಿಗೆ ಮತ್ತೊಂದು ಹೊಡೆತ:IndiGo ಹೊಸ ದರ ಜಾರಿ

0
87

ಇರಾನ್–ಇಸ್ರೇಲ್ ಯುದ್ಧದ ಪರಿಣಾಮ: ಇಂಡಿಗೋ ಟಿಕೆಟ್‌ಗಳಿಗೆ ಹೊಸ ಇಂಧನ ಶುಲ್ಕ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಸಂಘರ್ಷದ ಪರಿಣಾಮ ಈಗ ಜಾಗತಿಕ ವಿಮಾನಯಾನ ಕ್ಷೇತ್ರಕ್ಕೂ ತಟ್ಟಿದೆ. IndiGo ವಿಮಾನಯಾನ ಸಂಸ್ಥೆ ತನ್ನ ವಿಮಾನ ಟಿಕೆಟ್‌ಗಳ ಮೇಲೆ ಹೊಸ ಇಂಧನ ಶುಲ್ಕ (Fuel Surcharge) ವಿಧಿಸುವುದಾಗಿ ಘೋಷಿಸಿದೆ. ಈ ಹೊಸ ದರಗಳು ಮಾರ್ಚ್ 14ರಿಂದ ಜಾರಿಗೆ ಬರಲಿವೆ ಎಂದು ಸಂಸ್ಥೆ ತಿಳಿಸಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ Iran–Israel conflict ಹಾಗೂ ಅಮೆರಿಕದ ಭಾಗವಹಿಸುವಿಕೆಯಿಂದ ಉಂಟಾದ ಉದ್ವಿಗ್ನತೆಯ ಪರಿಣಾಮವಾಗಿ ವಿಮಾನಯಾನ ಟರ್ಬೈನ್ ಇಂಧನ (ATF) ಬೆಲೆಗಳು ಹೆಚ್ಚಾಗಿದ್ದು, ಇದು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚದ ಮೇಲೆ ದೊಡ್ಡ ಪರಿಣಾಮ ಬೀರಿದೆ.

ದೇಶೀಯ ಮತ್ತು ವಿದೇಶಿ ಪ್ರಯಾಣಕ್ಕೆ ಹೊಸ ಇಂಧನ ಶುಲ್ಕ: ಇಂಡಿಗೋ ಪ್ರಕಟಣೆಯ ಪ್ರಕಾರ, ಪ್ರಯಾಣದ ದೂರ ಮತ್ತು ಮಾರ್ಗದ ಆಧಾರದಲ್ಲಿ ಇಂಧನ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಹೊಸ ದರಗಳು ಹೀಗಿವೆ: ದೇಶೀಯ ವಿಮಾನ ಪ್ರಯಾಣ: ₹425, ಮಧ್ಯಪ್ರಾಚ್ಯ ದೇಶಗಳಿಗೆ ಪ್ರಯಾಣ: ₹900, ದಕ್ಷಿಣ ಪೂರ್ವ ಏಷ್ಯಾ ಮತ್ತು ಚೀನಾ: ₹1,800, ಯುರೋಪ್ ದೇಶಗಳಿಗೆ ಪ್ರಯಾಣ: ₹2,300 ಈ ಶುಲ್ಕವು ದೇಶೀಯ ಹಾಗೂ ಅಂತರರಾಷ್ಟ್ರೀಯ ಟಿಕೆಟ್‌ಗಳ ಎರಡಕ್ಕೂ ಅನ್ವಯವಾಗಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಇಂಧನ ಬೆಲೆ ಏರಿಕೆಯಿಂದ ವಿಮಾನಯಾನ ಕ್ಷೇತ್ರಕ್ಕೆ ಹೊಡೆತ : ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ATF ಸುಮಾರು 35–40% ರಷ್ಟು ಪ್ರಮುಖ ಭಾಗವಾಗಿದೆ. ಇಂಧನದ ಬೆಲೆ ಏರಿಕೆಯಾದಾಗ ವಿಮಾನ ಟಿಕೆಟ್ ದರಗಳ ಮೇಲೂ ಪರಿಣಾಮ ಬೀರುತ್ತದೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಇಂಧನ ಸರಬರಾಜಿನ ಮೇಲೆ ಒತ್ತಡ, ಕೆಲವು ವಾಯುಪ್ರದೇಶಗಳ ಬಳಕೆಗೆ ನಿರ್ಬಂಧ, ವಿಮಾನ ಮಾರ್ಗಗಳಲ್ಲಿ ಬದಲಾವಣೆ, ಇವುಗಳ ಕಾರಣದಿಂದ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗಳು ಹೆಚ್ಚು ಜಟಿಲವಾಗಿವೆ ಎಂದು ತಜ್ಞರು ಹೇಳಿದ್ದಾರೆ.

ವಿಮಾನ ಪ್ರಯಾಣದ ವೆಚ್ಚ ಹೆಚ್ಚಾಗುವ ಸಾಧ್ಯತೆ : ಇಂಧನ ದರ ಏರಿಕೆಯ ಹಿನ್ನೆಲೆದಲ್ಲಿ ವಿಮಾನ ಸಂಸ್ಥೆಗಳು ಟಿಕೆಟ್‌ಗಳ ಮೇಲೆ ಸರ್‌ಚಾರ್ಜ್ ವಿಧಿಸುವುದು ಸಾಮಾನ್ಯ ಕ್ರಮವಾಗಿದೆ. ಇದೇ ಕಾರಣಕ್ಕೆ ಇಂಡಿಗೋ ಹೊಸ ಇಂಧನ ಶುಲ್ಕವನ್ನು ಪರಿಚಯಿಸಿದೆ. ವಿಮಾನಯಾನ ಕ್ಷೇತ್ರದ ವಿಶ್ಲೇಷಕರ ಪ್ರಕಾರ, ಪಶ್ಚಿಮ ಏಷ್ಯಾದ ಸಂಘರ್ಷ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿಮಾನ ಟಿಕೆಟ್ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ.