Home Advertisement
Home ಸುದ್ದಿ ದೇಶ ಐತಿಹಾಸಿಕ ಕ್ಷಣ: ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಪ್ರಧಾನಿ ಮೋದಿ ವಿಮಾನ ಲ್ಯಾಂಡಿಂಗ್

ಐತಿಹಾಸಿಕ ಕ್ಷಣ: ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಪ್ರಧಾನಿ ಮೋದಿ ವಿಮಾನ ಲ್ಯಾಂಡಿಂಗ್

0
112

ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಮಾನ ಇಳಿಕೆ: ಈಶಾನ್ಯ ಭಾರತದ ಮೊದಲ ELF ಉದ್ಘಾಟನೆ

ಅಸ್ಸಾಂ / ಮೊರಾನ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಮಾನವು ಶನಿವಾರ ಬೆಳಗ್ಗೆ ಅಸ್ಸಾಂನ ಮೊರಾನ್ ಪ್ರದೇಶದಲ್ಲಿರುವ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (Emergency Landing Facility – ELF) ಯಲ್ಲಿ ಮೊದಲ ಬಾರಿಗೆ ಇಳಿದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಈ ಮೂಲಕ ರಾಜ್ಯದ ಕಾರ್ಯತಂತ್ರ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ.

ಇದನ್ನೂ ಓದಿ: ದಾಂಡೇಲಿ: ದಟ್ಟಾರಣ್ಯದ ಮಧ್ಯೆ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ

ರಾಷ್ಟ್ರೀಯ ಹೆದ್ದಾರಿಯ ಮೇಲೆ ವಿಮಾನ ಲ್ಯಾಂಡಿಂಗ್: ತುರ್ತು ಸಂದರ್ಭಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡ್ ಆಗಲು ಅನುಕೂಲವಾಗುವಂತೆ, ರಾಷ್ಟ್ರೀಯ ಹೆದ್ದಾರಿಯೊಂದನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಹೆದ್ದಾರಿ ಸುಮಾರು 4.2 ಕಿ.ಮೀ. ಉದ್ದ ಇದ್ದು, ತುರ್ತು ಪರಿಸ್ಥಿತಿಯಲ್ಲಿ ಸೇನಾ ಹಾಗೂ ಭದ್ರತಾ ಕಾರ್ಯಾಚರಣೆಗಳಿಗೆ ಬಳಕೆಯಾಗಲಿದೆ. ಪ್ರಧಾನಿ ಮೋದಿ ಮೊದಲ ಲ್ಯಾಂಡಿಂಗ್ ಮಾಡುವ ಮೂಲಕ ಈ ಸೌಲಭ್ಯವನ್ನು ಅಧಿಕೃತವಾಗಿ ಉದ್ಘಾಟಿಸಿದರು

ಚಾಬುವಾದಿಂದ ಮೊರಾನ್‌ಗೆ ಪ್ರಯಾಣ: ಪ್ರಧಾನಿ ಮೋದಿ ಅವರು ದಿಬ್ರುಗಢ ಜಿಲ್ಲೆಯ ಮೊರಾನ್ ಬೈಪಾಸ್‌ನಲ್ಲಿರುವ ELF ತಲುಪಲು, ಚಾಬುವಾ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದರು. ಈ ಯೋಜನೆಗೆ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು, ಇದು ಈಶಾನ್ಯ ರಾಜ್ಯಗಳಲ್ಲಿನ ಮೊದಲ ಇಂತಹ ಮೂಲಸೌಕರ್ಯ ಯೋಜನೆಯಾಗಿದೆ.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ‘ಹಲ್ಕಾ ಡಾನ್ʼ

5,500 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ: ಚುನಾವಣೆ ಎದುರಿಸುತ್ತಿರುವ ಅಸ್ಸಾಂ ರಾಜ್ಯದ ಒಂದು ದಿನದ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು 5,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ. ರಸ್ತೆ, ಸಂಪರ್ಕ, ಮೂಲಸೌಕರ್ಯ ಮತ್ತು ಭದ್ರತಾ ಕ್ಷೇತ್ರಗಳಿಗೆ ಒತ್ತು, ಈಶಾನ್ಯ ಭಾರತದ ಸಮಗ್ರ ಅಭಿವೃದ್ಧಿಗೆ ಬಲ, ನೀಡುವ ಗುರಿಯನ್ನು ಹೊಂದಿದ್ದಾರೆ.

ಗಣ್ಯರಿಂದ ಸ್ವಾಗತ: ಮೊರಾನ್‌ನಲ್ಲಿ ಪ್ರಧಾನಿ ಮೋದಿಯವರನ್ನು ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಹಾಗೂ ಹಿರಿಯ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಇದನ್ನೂ ಓದಿ: ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ

ಭದ್ರತೆ ಮತ್ತು ಅಭಿವೃದ್ಧಿಗೆ ಹೊಸ ದಿಕ್ಕು: ಈ ತುರ್ತು ಲ್ಯಾಂಡಿಂಗ್ ಸೌಲಭ್ಯವು ರಾಷ್ಟ್ರ ಭದ್ರತೆಗೆ ಬಲ, ಸೇನಾ ಕಾರ್ಯಾಚರಣೆಗಳಿಗೆ ನೆರವು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ವೇಗದ ರಕ್ಷಣಾ ಕಾರ್ಯ, ಈಶಾನ್ಯ ಭಾರತದ ತಂತ್ರಜ್ಞಾನದ ಅಭಿವೃದ್ಧಿಗೆ ಉತ್ತೇಜನ ನೀಡುವ ಮಹತ್ವದ ಯೋಜನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಶಾನ್ಯ ಭಾರತದ ಅಭಿವೃದ್ಧಿಗೆ ಹೊಸ ಅಧ್ಯಾಯ: ಮೊರಾನ್‌ನ ELF ಉದ್ಘಾಟನೆಯ ಮೂಲಕ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹೊಸ ಅಧ್ಯಾಯ ಆರಂಭವಾಗಿದ್ದು, ಕೇಂದ್ರ ಸರ್ಕಾರದ ಬದ್ಧತೆಯನ್ನು ಇದು ಸ್ಪಷ್ಟಪಡಿಸಿದೆ.

Previous articleದಾಂಡೇಲಿ: ದಟ್ಟಾರಣ್ಯದ ಮಧ್ಯೆ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ
Next articleಭಾರತಕ್ಕೆ ಸೋಲಿನ ಭೀತಿ? ಜಿಂಬಾಬ್ವೆ ಗೆಲುವಿನ ಹಿಂದೆ ಅಡಗಿದೆ ಟೀಮ್ ಇಂಡಿಯಾದ ‘ಲಕ್ಕಿ’ ಇತಿಹಾಸ!