Home Advertisement
Home ಸುದ್ದಿ ದೇಶ ಮೂವರು ಸಹೋದರಿಯರ ಆತ್ಮಹತ್ಯೆ: ಡೆತ್‌ ನೋಟ್‌ನಲ್ಲಿದ್ದಿದ್ದೇನು?

ಮೂವರು ಸಹೋದರಿಯರ ಆತ್ಮಹತ್ಯೆ: ಡೆತ್‌ ನೋಟ್‌ನಲ್ಲಿದ್ದಿದ್ದೇನು?

0
239

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇಶಾದ್ಯಂತ ಆಘಾತಕ್ಕೆ ಕಾರಣವಾಗಿದೆ. ಈ ದುರ್ಘಟನೆ ಇಂದು (ಫೆಬ್ರವರಿ 4) ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು 12, 14 ಮತ್ತು 16 ವರ್ಷದ ಸಹೋದರಿಯರೆಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮೊದಲು ಅವರು “ಕ್ಷಮಿಸಿ ಅಪ್ಪ” ಎಂದು ಬರೆದಿರುವ ಡೆತ್ ನೋಟ್ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಹತ್ಯೆ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ಸಹೋದರಿಯರು ರಾತ್ರಿ ಸಮಯದಲ್ಲಿ ತಮ್ಮ ಅಪಾರ್ಟ್‌ಮೆಂಟ್‌ನ ಮೇಲ್ಮಹಡಿಗೆ ತೆರಳಿ, ಅಲ್ಲಿಂದ ಕೆಳಗೆ ಜಿಗಿದು ಪ್ರಾಣ ಬಿಟ್ಟಿದ್ದಾರೆ. ಸ್ಥಳೀಯ ನಿವಾಸಿಗಳು ಶಬ್ದ ಕೇಳಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮೂವರು ಸ್ಥಳದಲ್ಲೇ ಮೃತಪಟ್ಟಿರುವುದು ದೃಢಪಟ್ಟಿದೆ.

ಘಟನಾ ಸ್ಥಳದಿಂದ ಡೆತ್ ನೋಟ್ ಹಾಗೂ ಕೆಲವು ವೈಯಕ್ತಿಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ತಂದೆಗೆ ಕ್ಷಮೆಯಾಚಿಸಿರುವ ಮಾತುಗಳು ಕಂಡುಬಂದಿದ್ದು, ಕುಟುಂಬದವರಲ್ಲಿ ಆಳವಾದ ದುಃಖ ಮೂಡಿಸಿದೆ. ಅದರಲ್ಲಿ ಅಳುವ ಎಮೋಜಿ ಇದ್ದು, ಪುಟದ ಮೇಲೆ ಹಿ “ನಿಜವಾದ ಜೀವನ ಕಥೆ. ಈಸ್ ಡೈರಿ ಮೇ ಜೋ ಕುಚ್ ಭಿ ಲಿಖಾ ಹೈ, ವೋ ಸಬ್ ಪಡ್‌ ಲೋ, ಕ್ಯೂಂಕಿ ಯೇ ಸಬ್ ಸಚ್ ಹೈ . (ಈ ಡೈರಿಯಲ್ಲಿ ನೀವು ಏನೇ ನೋಡುತ್ತಿದ್ದರೂ, ಎಲ್ಲವನ್ನೂ ಓದಿ, ಏಕೆಂದರೆ ಎಲ್ಲವೂ ನಿಜ) ಈಗ ಓದಿ! ನನಗೆ ನಿಜವಾಗಿಯೂ ಕ್ಷಮಿಸಿ, ಕ್ಷಮಿಸಿ ಅಪ್ಪಾ.” ಎಂದು ಬರೆದಿದ್ದಾರೆ

ಇದನ್ನೂ ಓದಿ: ವಂಟಮೂರಿ ಮಹಿಳೆ ವಿವಸ್ತ್ರ ಪ್ರಕರಣ – ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಕೆಲವು ವರದಿಗಳ ಪ್ರಕಾರ, ಆನ್ಲೈನ್ ಗೇಮಿಂಗ್ ಹಾಗೂ ಕೊರಿಯನ್ ಗೇಮ್ ಅಪ್ಲಿಕೇಶನ್‌ಗಳ ಮೇಲೆ ಈ ಬಾಲಕಿಯರಿಗೆ ಅತಿಯಾದ ಆಸಕ್ತಿ ಇದ್ದುದರಿಂದ ಮನೆಯೊಳಗೆ ಗಲಾಟೆ ಉಂಟಾಗುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೊಬೈಲ್ ಫೋನ್‌ಗಳು, ಸಾಮಾಜಿಕ ಜಾಲತಾಣ ಬಳಕೆ ಹಾಗೂ ಗೇಮಿಂಗ್ ಚಟುವಟಿಕೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಮೃತ ಬಾಲಕಿಯರ ತಂದೆ-ತಾಯಿ ತೀವ್ರ ದುಃಖದಲ್ಲಿ ಮುಳುಗಿದ್ದು, ಕುಟುಂಬಸ್ಥರು ಮಾತಾಡಲು ಸಹ ಸಿದ್ಧರಾಗಿಲ್ಲ. ಈ ಘಟನೆ ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣ ಮಾಡಿದೆ.

ಇದನ್ನೂ ಓದಿ: ಹಂಪಿಗೆ ತೆರಳುತ್ತಿದ್ದ ಕೇರಳ ವಿದ್ಯಾರ್ಥಿಗಳ ಮಿನಿ ಬಸ್ ಪಲ್ಟಿ

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.

ಮಾನಸಿಕ ಆರೋಗ್ಯ ತಜ್ಞರು, ಮಕ್ಕಳ ಮೇಲೆ ಅತಿಯಾದ ಒತ್ತಡ, ಒಂಟಿತನ ಮತ್ತು ಆನ್ಲೈನ್ ಅವಲಂಬನೆ ಇಂತಹ ದುರಂತಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಪೋಷಕರು ಮಕ್ಕಳ ಮನಸ್ಥಿತಿಯನ್ನು ಅರಿತು, ಅವರೊಂದಿಗೆ ಹೆಚ್ಚು ಸಂವಾದ ನಡೆಸಬೇಕೆಂದು ಸಲಹೆ ನೀಡಿದ್ದಾರೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ. 24×7 ಸಹಾಯಕ್ಕಾಗಿ ಕಿರಣ್ ಮಾನಸಿಕ ಆರೋಗ್ಯ ಸಹಾಯವಾಣಿ – 1800-599-0019 ಅನ್ನು ಸಂಪರ್ಕಿಸಬಹುದು.

Previous articleಹಂಪಿಗೆ ತೆರಳುತ್ತಿದ್ದ ಕೇರಳ ವಿದ್ಯಾರ್ಥಿಗಳ ಮಿನಿ ಬಸ್ ಪಲ್ಟಿ
Next articleಹೊಸ ಮೈಲಿಗಲ್ಲು ಸೃಷ್ಟಿಸಿದ ಕರ್ನಾಟಕದ ಹೆಮ್ಮೆಯ KSDL