ಮುಳಬಾಗಿಲು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೋವು ತಾಳಲಾರದೆ ಅತಿಯಾಗಿ ಮದ್ಯ ಸೇವಿಸಿ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ನಗರದ ಹಳೆ ಜೈನ್ ಸ್ಕೂಲ್ ಕಾಂಪೌಂಡ್‌ನಲ್ಲಿ ಗುರುವಾರ ಮುಂಜಾನೆ ಮಹಿಳೆಯ ಶವ ಪತ್ತೆಯಾಗಿದ್ದು ಆಕೆಯ ಗುರುತು ಸಿಕ್ಕಿದೆ.
ತಾಲೂಕಿನ ಗ್ರಾಮವೊಂದರ ನಿವಾಸಿಯಾದ 45 ವರ್ಷದ ಮಹಿಳೆ ಮದ್ಯ ಸೇವಿಸಿ ಶಾಲಾ ಆವರಣದಲ್ಲಿ ಮಲಗಿದ್ದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಪತಿ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಈಕೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತಳಿಗೆ ಇಬ್ಬರು ಮಕ್ಕಳಿದ್ದು ನಗರದ ಅಜ್ಜಿ ಮನೆಯಲ್ಲಿದ್ದಾರೆ.























